ದಕ್ಷಿಣ ಕನ್ನಡ: ಕೇವಲ 15 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವತಿಯೋರ್ವಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಹೊರವಲಯ ಅಂಬ್ಲಮೊಗರು ಎಂಬಲ್ಲಿ ನಡೆದಿದೆ.
ಹೌದು, ರಶ್ಮಿ (24) ಸಾವಿಗೆ ಶರಣಾದ ನವವಿವಾಹಿತೆಯಾಗಿದ್ದು, ಮಂಗಳೂರಿನ ಗಂಜಿಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಜೊತೆ ರಶ್ಮಿ ಅವರ ವಿವಾಹವು 15 ದಿನಗಳ ಹಿಂದೆ ನಡೆದಿತ್ತು.
ಸೆಪ್ಟೆಂಬರ್ 3ರಂದು ಅಕ್ಕನ ಮನೆಗೆ ತೆರಳಿದ್ದ ರಶ್ಮಿ, ಇಲಿ ಪಾಷಾಣ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಷ್ಟವಿಲ್ಲದೆ ಮದುವೆ ಮಾಡಿದ್ದೇ ರಶ್ಮಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ.