16 ಸ್ಪರ್ಧಿಗಳಿಂದ ಆರಂಭ ಆದ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಈಗ 9 ಜನ ಉಳಿದುಕೊಂಡಿದ್ದು, ಐದನೇ ವಾರದಲ್ಲಿ ಆಟದ ಮಜಾ ಹೆಚ್ಚಿದೆ. ಈಗ ಮತ್ತಷ್ಟು ರೋಚಕತೆಗಾಗಿ ಬಿಗ್‌ಬಾಸ್ ಎಲ್ಲಾ ಸ್ಪರ್ಧಿಗಳಿಗೆ ಬಂಪರ್ ಆಫರ್ ಘೋಷಿಸಿದೆ.
ಹೌದು, ಬಿಗ್ ಬಾಸ್ ಮನೆಯ ಸದಸ್ಯರು ಬರೋಬ್ಬರಿ 5 ಲಕ್ಷ ರೂಪಾಯಿ ಗೆಲ್ಲಬಹುದು ಎಂದು ಆಫರ್ ಘೋಷಣೆ ಆಗುತ್ತಿದ್ದಂತೆಯೇ ಎಲ್ಲ ಸ್ಪರ್ಧಿಗಳಿಗೂ ಹುಮ್ಮಸ್ಸು ಹೆಚ್ಚಾಗಿದೆ. ವೈಯಕ್ತಿಕವಾಗಿ, ತಂಡಗಳಾಗಿ ವಿವಿಧ ಟಾಸ್ಕ್ಗಳನ್ನು ಆಡಿದ್ದು, ಕೆಲವು ಟಾಸ್ಕ್ಗಳಲ್ಲಿ ಗೆದ್ದಿದ್ದೀರಿ, ಇನ್ನು ಕೆಲವು ಟಾಸ್ಕ್ಗಳಲ್ಲಿ ಕಲಿತಿದ್ದೀರಿ. ಈ ವಾರದ ಟಾಸ್ಕ್ನಲ್ಲಿ ಮನೆಯ ಸದಸ್ಯರಿಗೆ 5 ಲಕ್ಷ ರೂಪಾಯಿವರೆಗೆ ಹಣ ಸಂಗ್ರಹಿಸುವ ಅವಕಾಶವನ್ನು ಬಿಗ್ ಬಾಸ್ ನೀಡುತ್ತಿದ್ದಾರೆ ಎಂಬ ಘೋಷಣೆ ಮಾಡಲಾಗಿದೆ.
ಇನ್ನು, ಈ 5 ಲಕ್ಷ ರೂಪಾಯಿ ಗಳಿಸಲು ಸ್ಪರ್ದಿಗಳಿಗೆ ವಿವಿಧ ಟಾಸ್ಕ್ಗಳು ಇರುತ್ತವೆ. ಪ್ರತಿ ಟಾಸ್ಕ್ನ ಮೌಲ್ಯ ಮತ್ತು ಆಡುವ ಸದಸ್ಯರ ಸಂಖ್ಯೆಯನ್ನು ತಿಳಿಸಲಾಗುತ್ತಿದೆ. ಈ ಟಾಸ್ಕ್ ನಲ್ಲಿ ಮನೆಯ ಸದಸ್ಯರು ಸಂಗ್ರಹಿಸಿದ ಹಣವನ್ನು ಫಿನಾಲೆ ವೇದಿಕೆಯಲ್ಲಿ ಜನಮೆಚ್ಚಿದ ಒಬ್ಬ ಸದಸ್ಯನಿಗೆ ನೀಡಲಾಗುತ್ತದೆ. ಪ್ರತಿ ಟಾಸ್ಕ್ ಅನ್ನು ಮನಸ್ಸಿಟ್ಟು ಆಡಿ, ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳಿ ಎಂದು ಬಿಗ್ ಬಾಸ್ ಹೇಳಿದ್ದಾರೆ.