New rules | ಹೊಸ ವರ್ಷಕ್ಕೆ ಹೊಸ ರೂಲ್ಸ್; ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ

New rules : 2025ರ ಜನವರಿ 1 ರಿಂದ ಹೊಸ ವರ್ಷಕ್ಕೆ ಹೊಸ ರೂಲ್ಸ್ ಜಾರಿಯಾಗಲಿದ್ದು, ದೇಶಾದ್ಯಂತ ಹೊಸ ವರ್ಷದಲ್ಲಿ LPG ಬೆಲೆ ಏರಿಕೆ, GST ನಿಯಮ, UPI 123 ಪಾವತಿ ಸೇರಿದಂತೆ ಈ…

New rules 2025

New rules : 2025ರ ಜನವರಿ 1 ರಿಂದ ಹೊಸ ವರ್ಷಕ್ಕೆ ಹೊಸ ರೂಲ್ಸ್ ಜಾರಿಯಾಗಲಿದ್ದು, ದೇಶಾದ್ಯಂತ ಹೊಸ ವರ್ಷದಲ್ಲಿ LPG ಬೆಲೆ ಏರಿಕೆ, GST ನಿಯಮ, UPI 123 ಪಾವತಿ ಸೇರಿದಂತೆ ಈ ನಿಯಮಗಳು ಬದಲಾಗುತ್ತವೆ.

New rules : ಹೊಸ ವರ್ಷದಲ್ಲಿ ಈ ನಿಯಮಗಳು ಬದಲಾಗುತ್ತವೆ

  • ಜನವರಿ 1 ರಿಂದ LPG ಬೆಲೆ ಏರಿಕೆ ಸಾಧ್ಯತೆ.
  • FDಗೆ ಸಂಬಂಧಿಸಿದ ನಿಯಮಗಳು ಸಹ ಬದಲಾಗುತ್ತವೆ.
  • GST ನಿಯಮಗಳಲ್ಲಿ ಬದಲಾವಣೆ.
  • UPI 123 ಪಾವತಿ ವಹಿವಾಟಿನ ಮಿತಿ ₹ 10 ಸಾವಿರ ಆಗಲಿದೆ.
  • EPFO ಸದಸ್ಯರಿಗೆ ATM ಸೌಲಭ್ಯ ಸಿಗುವ ಸಾಧ್ಯತೆ.
  • ರೈತರಿಗೆ ಯಾವುದೇ ಖಾತರಿಯಿಲ್ಲದೆ 2 ಲಕ್ಷ ರೂ. ಸಾಲ.
  • ಸೆನ್ಸೆಕ್ಸ್, ಬ್ಯಾಂಕೆಕ್ಸ್ ಮತ್ತು ಸೆನ್ಸೆಕ್ಸ್‌ನ ಸಾಪ್ತಾಹಿಕ ಒಪ್ಪಂದಗಳು ಶುಕ್ರವಾರದ ಬದಲಿಗೆ ಮಂಗಳವಾರ ಕೊನೆಗೊಳ್ಳುತ್ತವೆ.
  • ಕಾರು ಬೆಲೆಗಳು ಹೆಚ್ಚಾಗಬಹುದು
  • ಪಡಿತರ ವಿತರಣೆ ನಿಯಮ ಬದಲು
  • ಡೇಟಾ ಶುಲ್ಕ ಹೆಚ್ಚಳ
  • ಬ್ಯಾಂಕ್ ಖಾತೆ ಬಂದ್
  • ರೈಲು ಸಮಯ ಬದಲು

ಇದನ್ನೂ ಓದಿ:  ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಬ್ಬಗಳು

ಎಲ್‌ಪಿಜಿ ತುಟ್ಟಿಸಾಧ್ಯತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 73.58 ಡಾಲರ್ ತಲುಪಿದೆ. ಹೀಗಾಗಿ ಜ.1ರಿಂದಲೇ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಆಗುವುದು ಬಹುತೇಕ ನಿಶ್ಚಿತ ಆಗಿದೆ. ಇನ್ನು ಎಲ್‌ಪಿಜಿ ಸಿಲಿಂಡ‌ರ್ ದರವನ್ನು ಯುಪಿಐನಲ್ಲೇ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಲಭಿಸಲಿದೆ.

Vijayaprabha Mobile App free

ಕಾರು ಬೆಲೆಯಲ್ಲಿ ಹೆಚ್ಚಳ

ಹೊಸ ವರ್ಷಕ್ಕೆ ದೇಶದ ಕೆಲವು ಪ್ರಮುಖ ಕಾರು ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲಿವೆ. ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಹ್ಯುಂಡೈ & ಮಹೀಂದ್ರಾ ಮುಂತಾದ ಕಾರು ಕಂಪನಿಗಳು ಶೇಕಡಾ 3 ರಷ್ಟು ಕಾರು ಬೆಲೆ ಹೆಚ್ಚಿಸುವುದಾಗಿ ಹೇಳಿವೆ.

ಜಿಎಸ್‌ಟಿ ನಿಯಮ

ತೆರಿಗೆದಾರರು ಜ.1ರಿಂದ ಕಟ್ಟುನಿಟ್ಟಾದ ಜಿಎಸ್ ಟಿ ನಿಯಮ ಪಾಲಿಸಬೇಕು. ಎಂಎಫ್‌ಎ ಜಿಎಸ್‌ಟಿ ಪೋರ್ಟಲ್ ಪ್ರವೇಶಿಸುವ 20 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಹಾಗೆಯೇ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳಿಗೆ ಮಾತ್ರ ಇನ್ಮುಂದೆ ಇ-ವೇ ಬಿಲ್‌ ರಚಿಸಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಭದ್ರತೆಗೆ 11,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ

ಪಡಿತರ ವಿತರಣೆ ನಿಯಮ ಬದಲು

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಜ.1 ರಿಂದ ಪಡಿತರದ ಜತೆಗೆ 1 ಸಾವಿರ ರೂ. ಹೆಚ್ಚುವರಿ ಆರ್ಥಿಕ ನೆರವು ನೀಡುವ ನಿಯಮ ಜಾರಿಯಾಗಲಿದೆ. ಸರಿಸುಮಾರು 80 ಕೋಟಿ ಜನರು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರ ಕಾರ್ಡ್‌ಗಳು ರದ್ದಾಗಲಿವೆ. ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ. & ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂ.ಗೆ ನಿಗದಿಯಾಗಲಿದೆ.

ಡೇಟಾ ಶುಲ್ಕ ಹೆಚ್ಚಳ

ಮೊಬೈಲ್ ಡೇಟಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಜನವರಿ 1, 2025 ರಿಂದ ಆಪರೇಟಿಂಗ್ ಸಿಸ್ಟಂನ ಹಳೆಯ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಅನೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. 2 Samsung, LG, Sony, HTC & Motorola ಬ್ರಾಂಡ್ ಒಳಗೊಂಡಿದೆ.

2025ರಲ್ಲಿ ಸಿಮ್‌ ಖರೀದಿಸುವವರು ಈ ರೂಲ್ಸ್‌ ಫಾಲೋ ಮಾಡಲೇಬೇಕು

ಹೊಸ ವರ್ಷದ ಬೆನ್ನಲ್ಲೇ ಟೆಲಿಕಾಂ ಕ್ಷೇತ್ರದಲ್ಲಿ ಹಲವು ನಿಯಮಗಳು ಬದಲಾಗಲಿವೆ. ಭಾರತದಲ್ಲಿ ಪ್ರಸ್ತುತ ಸೈಬರ್ ವಂಚನೆ ಸೇರಿದಂತೆ ಹಲವು ಸ್ಪ್ಯಾಮ್‌ಗಳು ಬೆಳಕಿಗೆ ಬರುತ್ತಿದೆ. ಸ್ಪ್ಯಾಮ್‌ಗಳಿಗಾಗಿ ನಕಲಿ ದಾಖಲೆಗಳನ್ನು ನೀಡಿ ವಂಚಕರು ಸಿಮ್ ಖರೀದಿಸುತ್ತಿದ್ದಾರೆ. ಈ ವಂಚನೆಗಳನ್ನು ತಡೆಯಲು ಡಿಪಾರ್ಟ್‌ಮೆಂಟ್ ಆಫ್ ಟೆಲಿಕಮ್ಯೂನಿಕೇಶನ್‌ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರುತ್ತಿದೆ. ಈ ಪ್ರಕಾರ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸುವಂತಿಲ್ಲ. ನಕಲಿ ದಾಖಲೆ ಮೂಲಕ ಸಿಮ್ ಖರೀದಿಸಿದರೆ ಅವರಿಗೆ 3 ವರ್ಷ ಬ್ಯಾನ್ ಶಿಕ್ಷೆ ನೀಡಲಾಗುತ್ತದೆ.

ಪಿಎಫ್‌ ವಿತ್‌ಡ್ರಾ ಇನ್ನಷ್ಟು ಸುಲಭ

ಜ.1ರಿಂದ ಪಿಂಚಣಿದಾರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮ ಜಾರಿಗೊಳಿಸಲಿದೆ. ಇದರನ್ವಯ ಪಿ೦ಚಣಿದಾರರು ದೇಶದ ಯಾವುದೇ ಮೂಲೆಯಿಂದಾದರೂ ಪಿಎಫ್‌ ವಿತ್ ಡ್ರಾ ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್ ನಿಂದಾದರೂ ಈ ಸೌಲಭ್ಯ ಪಡೆದುಕೊಳ್ಳುವ ಅವಕಾಶ ನೌಕರರಿಗೆ ಸಿಗಲಿದೆ.

ಇದನ್ನೂ ಓದಿ: ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ವೀಲ್ಹಿಂಗ್: ಯುವಕನ ವಿರುದ್ಧ ಪ್ರಕರಣ ದಾಖಲು 

ಬ್ಯಾಂಕ್ ಖಾತೆ ಬಂದ್

ಠೇವಣಿ ಸುರಕ್ಷತೆ ಹೆಚ್ಚಿಸಲು ಆದ್ಯತೆ ನೀಡುವ ಜತೆಗೆ ಚಟುವಟಿಕೆ ಇಲ್ಲದ ಬ್ಯಾಂಕ್ ಖಾತೆಗಳು ಜ.1ರಿಂದಲೇ ಬ೦ದ್ ಆಗಲಿವೆ. ಇಂಟರ್‌ನೆಟ್ ಬಳಸದಿದ್ದರೂ ಹಣ ಪಾವತಿ ಮಾಡಲು ಆರ್ ಬಿಐ ತಂದಿರುವ ಯುಪಿಐ 123ಪೇ ಪಾವತಿದಾರರಿಗೆ ವಹಿವಾಟು ಮಿತಿ ಈಗಿರುವ 5 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳವಾಗಲಿದೆ.

ರೈಲು ಸಮಯ ಬದಲು

ಭಾರತೀಯ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಪಟ್ಟಿಯನ್ನು ಜ.1ರಿಂದಲೇ ಜಾರಿಗೊಳಿಸಲಿದೆ. ಈವರೆಗೆ ಜು.1ರಿಂದ ಹೊಸ ವೇಳಾಪಟ್ಟಿ ಪ್ರಕಟವಾಗುತ್ತಿತ್ತು. ಹೀಗಾಗಿ ರೈಲ್ವೆ ಪ್ರಯಾಣಿಕರು ಇದನ್ನು ಗಮನಿಸುವುದು ಒಳಿತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.