ವಾಹನ ಚಾಲಕರಿಗೆ ಒಳ್ಳೆಯ ಸುದ್ದಿ: ಮುಂದಿನ ತಿಂಗಳಿನಿಂದ ಡ್ರೈವಿಂಗ್ ಲೈಸನ್ಸ್ ನಲ್ಲಿ ಹೊಸ ನಿಯಮ; ಮನೆಯಿಂದಲೇ ಈ ಸೇವೆಗಳನ್ನು ಪಡೆಯಿರಿ!

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಚಾಲನಾ ಪರವಾನಗಿಗೆ ಸಂಬಂಧಿಸಿದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಿಂದ ಅನೇಕ ಜನರು ಪ್ರಯೋಜನ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕಲಿಯುವವರ ಪರವಾನಗಿ (ಲರ್ನರ್…

old vehicles vijayaprabha

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಚಾಲನಾ ಪರವಾನಗಿಗೆ ಸಂಬಂಧಿಸಿದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಿಂದ ಅನೇಕ ಜನರು ಪ್ರಯೋಜನ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕಲಿಯುವವರ ಪರವಾನಗಿ (ಲರ್ನರ್ ಲೈಸನ್ಸ್ ) ಪಡೆಯಲು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಿಂದ ಕಲಿಕೆಯ ಪರವಾನಗಿ ಪಡೆಯಬಹುದು.

ಹೊಸ ನಿಯಮಗಳು ಜುಲೈ 1 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳು ಜಾರಿಗೆ ಬಂದ ನಂತರ, ವಾಹನ ಚಾಲಕರು ಕಲಿಕೆ ಪರವಾನಗಿ ಪಡೆಯಲು ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ನೀವು ಮನೆಯಿಂದ ಕಲಿಕೆಯ ಪರವಾನಗಿ ಪಡೆಯಬಹುದು. ಹೊಸ ನಿಯಮಗಳಿಗೆ ಅನುಸಾರವಾಗಿ ಕೇಂದ್ರ ಸರ್ಕಾರವು ಸಾರಥಿ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ.

ಆನ್‌ಲೈನ್ ಕಲಿಕೆ ಪರವಾನಗಿ ಪಡೆಯಲು ನೀವು ರಾಜ್ಯ ಸರ್ಕಾರಿ ಸಾರಿಗೆ ಇಲಾಖೆಯ (ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್) ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಇಲ್ಲದಿದ್ದರೆ ಪರಿವಾಹನ್ ಅಥವಾ ಸಾರಥಿ ವೆಬ್‌ಸೈಟ್‌ಗಳಿಗೆ ಹೋಗಿ, ಅಲ್ಲಿಂದ ನೀವು ಕಲಿಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಶುಲ್ಕವನ್ನು ಆನ್‌ಲೈನ್‌ನಲ್ಲಿಯೂ ಪಾವತಿಸಬೇಕು.

Vijayaprabha Mobile App free

ಆನ್‌ಲೈನ್ ಪರೀಕ್ಷೆಯನ್ನು ಕೂಡ ನಿಮ್ಮ ಮನೆಯಿಂದ ನೀವು ಪೂರ್ಣಗೊಳಿಸಬಹುದು. ಆರ್ ಟಿ ಓ ಕಚೇರಿಗೆ ಹೋಗಬೇಕಾದ ಅವಶ್ಯಕತೆಯಿಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕಲಿಕೆಯ ಪರವಾನಗಿ ಪಡೆಯಬಹುದು. ಮೊದಲು ಈ ಸೇವೆಗಳು ಉತ್ತರ ಪ್ರದೇಶದಲ್ಲಿ ಜಾರಿಗೆ ಬರಲಿದ್ದು, ನಂತರ ಇತರ ರಾಜ್ಯಗಳಲ್ಲಿ ಕೂಡ ಜಾರಿಗೆ ಬರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.