ಏರ್ಟೆಲ್ ಹೊಸ ಪ್ಲಾನ್ ಘೋಷಿಸಿದ್ದು, ಇದರಲ್ಲಿ Disney+Hot Star, Amazon Prime, Xtreme OTT ಚಂದಾದಾರಿಕೆಯ ಜೊತೆಗೆ ಫಾಸ್ಟ್ಯಾಗ್ನಲ್ಲಿ 100ರೂ ಕ್ಯಾಶ್ಬ್ಯಾಕ್ ಪಡೆಯಬಹುದು.
ಏರ್ಟೆಲ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ್ದು,
ಏರ್ಟೆಲ್ ಹೊಸ ಪ್ರಿಪೇಯ್ಡ್ ಅನ್ನು ರೂ.999 ಕ್ಕೆ ಬಿಡುಗಡೆ ಮಾಡಿದೆ. ಈ ರೀತಿಯ ಆಫರ್ ನಿಂದ ನೀವು 84 ದಿನಗಳವರೆಗೆ ದಿನಕ್ಕೆ 2.5 GB ಡೇಟಾ, 100 SMS ಮತ್ತು ಅನಿಯಮಿತ ಕರೆಗಳನ್ನು ಪಡೆಯಬಹುದಾಗಿದೆ. ಜೊತೆಗೆ, Disney+Hot Star, Amazon Prime, Xtreme OTT ಅಪ್ಲಿಕೇಶನ್ಗಳ ಚಂದಾದಾರಿಕೆಗಳನ್ನು 84 ದಿನಗಳವರೆಗೆ ಪಡೆಯಬಹುದು.
ಅಷ್ಟೇ ಅಲ್ಲ , ಫಾಸ್ಟ್ಯಾಗ್ನಲ್ಲಿ ನೀವು ರೂ.100 ಕ್ಯಾಶ್ಬ್ಯಾಕ್, ಉಚಿತ ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ಸ್, ರಿವಾರ್ಡ್ಸ್ ಮಿನಿ ಚಂದಾದಾರಿಕೆಯನ್ನು ಸಹ ಪಡೆಯಬಹುದಾಗಿದ್ದು, ಇದು ಏರ್ಟೆಲ್ ಬಳಕೆದಾರರಿಗೆ ಬಂಪರ್ ಕೊಡುಗೆಯಾಗಿದೆ.