ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!

PAN Aadhaar Linking: ಪಾನ್ ಕಾರ್ಡ್ (Pan Card) ಇರುವ ಅವರಿಗೆ ಅಲರ್ಟ್. ಪಾನ್ ಕಾರ್ಡ್- ಆಧಾರ ಲಿಂಕ್‌ನಲ್ಲಿ (link PAN-Aadhaar card) ಹೊಸ ಅಪ್‌ಡೇಟ್ ತಂದಿದೆ ಆದಾಯ ತೆರಿಗೆ ಇಲಾಖೆ. ಪಾನ್ ಆಧಾರ…

PAN Card with Aadhaar Card

PAN Aadhaar Linking: ಪಾನ್ ಕಾರ್ಡ್ (Pan Card) ಇರುವ ಅವರಿಗೆ ಅಲರ್ಟ್. ಪಾನ್ ಕಾರ್ಡ್- ಆಧಾರ ಲಿಂಕ್‌ನಲ್ಲಿ (link PAN-Aadhaar card) ಹೊಸ ಅಪ್‌ಡೇಟ್ ತಂದಿದೆ ಆದಾಯ ತೆರಿಗೆ ಇಲಾಖೆ. ಪಾನ್ ಆಧಾರ ಸಂಪರ್ಕ ಪ್ರಕ್ರಿಯೆಯಲ್ಲಿ ಒಂದು ಆಪ್ಷನ್ ಬದಲಾಯಿಸಲಾಗಿದೆ. ಪಾನ್ ಕಾರ್ಡ್‌ನೊಂದಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯ. ಜೂನ್ 30, 2023 ರವರೆಗೆ ಮುಕ್ತಾಯವಾಗಲಿದೆ. ರೂ.1000 ಪಾವತಿಸಿ ಪಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡಬಹುದು.

ಇದನ್ನು ಓದಿ: ಪ್ರಧಾನಮಂತ್ರಿ ಟ್ರ್ಯಾಕ್ಟರ್ ಯೋಜನೆ: ಅದ್ಭುತ ಅವಕಾಶ, ಅರ್ಧ ಬೆಲೆಗೆ ಟ್ರ್ಯಾಕ್ಟರ್; ಅರ್ಹತೆ, ಅರ್ಜಿ ವಿವರ ಇಲ್ಲಿದೆ!

ಆದರೆ, ಆಧಾರ್ ಕಾರ್ಡ್ (Aadhar card) ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ರೂ.1000 ಪೆನಾಲ್ಟಿ ಪಾವತಿಸುವ ಮೊದಲು ಒಂದು ಆಪ್ಷನ್ ಮಾರ್ಪಟ್ಟಿದೆ (pan aadhaar link update news) ಎಂಬುದನ್ನು ಕಾರ್ಡ್ದಾರರು ನೆನಪಿಟ್ಟುಕೊಳ್ಳಬೇಕು. ಆದಾಯಪು ತೆರಿಗೆ ಇಲಾಖೆ ಅಸೆಸ್ಮೆಂಟ್ ಇಯರ್ ಆಯ್ಕೆಯನ್ನು ಬದಲಾಯಿಸಲಾಗಿದ್ದು, ದಂಡ ಪಾವತಿಸುವ ಸಮಯದಲ್ಲಿ ಆಯ್ಕೆ ಮಾಡಬೇಕಾದ ಆಯ್ಕೆ ಇದು.

Vijayaprabha Mobile App free

ಇದನ್ನು ಓದಿ: TUMUL ನಲ್ಲಿ 219 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮೂರೇ ದಿನ ಬಾಕಿ, ಇಂದೇ ಅರ್ಜಿ ಸಲ್ಲಿಸಿ

ಪಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್  (Linking PAN Card with Aadhaar Card) ಮಾಡಲು ಹಿಂದೆ ಮಾರ್ಚ್ 31 2023 ರವರೆಗೆ ಅವಧಿ ಇತ್ತು. ಆದ್ದರಿಂದ ಅಸೆಸ್ಮೆಂಟ್ ವರ್ಷ 2023-24 ಆಯ್ಕೆ ಮಾಡಲು ಅವಕಾಶವಿದೆ. ಆದರೆ, ಈಗ ಹೊಸ ವರ್ಷ ವರ್ಷದ ಪ್ರಾರಂಭವಾದ ಹಿನ್ನೆಲೆಯಲ್ಲಿ ಅಸೆಸ್‌ಮೆಂಟ್ ಇಯರ್‌ನ್ನು 2024-25 ಗೆ ಆಯ್ಕೆಮಾಡಬೇಕು. ಅದರಲ್ಲಿ ಪೇಮೆಂಟ್ ಅದರ್ ರಿಸಿಪ್ಟ್ಸ್ (500) ಎಂಬ ಆಪ್ಷನ್ ಸೆಲಕ್ಟ್ ಮಾಡಬೇಕು. ಈ ಬದಲಾವಣೆಯನ್ನು ಗಮನಿಸದೆ ಪೆನಾಲ್ಟಿ ಪಾವತಿಸಿದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ಏಏ ಪ್ರಕಾರ ಪಾನ್ ಕಾರ್ಡ್ ಇರುವವರು ಕಡ್ಡಾಯವಾಗಿ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗಿದೆ. ಈಗಾಗಲೇ ತುಂಬಾ ಜನರು ಲಿಂಕ್ ಮಾಡಿಕೊಂಡು ಇದ್ದಾರೆ. ಅಂತಹ ಅವರು ಒಂದು ಸರಿ ಪಾನ್-ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.

ಇದನ್ನು ಓದಿ: ರೇಷನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ, ಪಡಿತರ ಚೀಟಿದಾರರಿಗೆ ದುಪ್ಪಟ್ಟು ಲಾಭ!

ಪಾನ್-ಆಧಾರ್ ಲಿಂಕ್ ಹೇಗೆ ಮಾಡಬೇಕು:

ಮೊದಲು https://www.incometax.gov.in/iec/foportal/ ಓಪನ್ ಮಾಡಬೇಕು.

ನಂತರ ಹೋಮ್ ಪೇಜ್ ಗೆ ಹೋಗಿ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು.

ಆ ನಂತರ ಪಾನ್ ಸಂಖ್ಯೆ, ಆಧಾರ ಸಂಖ್ಯೆ ನಮೂದಿಸಬೇಕು

ಪೇಮೆಂಟ್‌ಗಾಗಿ ಆಯ್ಕೆ ಬರುತ್ತದೆ. ಅದನ್ನು ಆರಿಸಬೇಕು.

e-pay Tax ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಪಾನ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ; ಇನ್ಮುಂದೆ ಟಚ್ ಇಲ್ಲದೆ ಆಧಾರ್ ಬಯೋಮೆಟ್ರಿಕ್!

ಓಟಿಪಿ ವೆರಿಫೈ ಮಾಡಿದ ನಂತರ ಇನ್‌ಕಮ್ ಟ್ಯಾಕ್ಸ್ ಮೇಲೆ ಕ್ಲಿಕ್ ಮಾಡಬೇಕು.

ಆ ನಂತರ ಅಸೆಸ್ಮೆಂಟ್ ಇಯರ್ 2024-25 ಸೆಲೆಕ್ಟ್ ಮಾಡಿ, ಅದರ್ ರಿಸಿಪ್ಟ್ಸ್ (500) ಆಯ್ಕೆಗಳನ್ನು ಕ್ಲಿಕ್ ಮಾಡಬೇಕು.

ಆ ನಂತರ ಪೇಮೆಂಟ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

ಆ ನಂತರ ಚಲನ್ ಜನರೇಟ್ ಆಗುತ್ತದೆ. ಪೇಮೆಂಟ್ ಮಾಡಿದ 4-5 ದಿನಗಳ ನಂತರ ಪಾನ್-ಆಧಾರ್ ಲಿಂಕ್ ಮಾಡಬೇಕು.

ಇದನ್ನು ಓದಿ: ರೇಷನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ, ಪಡಿತರ ಚೀಟಿದಾರರಿಗೆ ದುಪ್ಪಟ್ಟು ಲಾಭ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.