Shocking News: ರಾಜ್ಯದಲ್ಲಿ 6 ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರ ಸಾವು!

ಬೆಂಗಳೂರು: ರಾಜ್ಯದಲ್ಲಿ ಆರು ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ವಿಚಾರವಾಗಿ ವಿರೋಧ ಪಕ್ಷಗಳ ಆರೋಪಕ್ಕೆ ರಾಜ್ಯ ಸರ್ಕಾರ ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದು, ಇದೇ…

ಬೆಂಗಳೂರು: ರಾಜ್ಯದಲ್ಲಿ ಆರು ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ವಿಚಾರವಾಗಿ ವಿರೋಧ ಪಕ್ಷಗಳ ಆರೋಪಕ್ಕೆ ರಾಜ್ಯ ಸರ್ಕಾರ ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದು, ಇದೇ ವೇಳೆ ರಾಜ್ಯದಲ್ಲಿ 47,90,466 ಶಿಶುಗಳ ಜನನವಾಗಿದೆ ಎನ್ನುವ ಮಾಹಿತಿ ನೀಡಿದೆ.

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕಚೇರಿಯಿಂದ ಬಾಣಂತಿಯರ ಸಾವಿನ ಬಗ್ಗೆ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳ ಸಾವಿನ ಪ್ರಮಾಣಗಳ ಬಗ್ಗೆಯೂ ಇದರಲ್ಲಿ ಮಾಹಿತಿಯನ್ನು ನೀಡಲಾಗಿದೆ. ಯಾವ ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಸಾವುಗಳು ನಡೆದಿವೆ ಹಾಗೂ ಇದಕ್ಕೆ ಕಾರಣಗಳೇನು ಎಂಬ ನಿಟ್ಟಿನಲ್ಲಿ ಅಂಕಿ- ಅಂಶಗಳನ್ನು ನೀಡಲಾಗಿದೆ.

ಶಿಶು ಜನನ ಹಾಗೂ ಮರಣ ಪ್ರಮಾಣ:

2019ರಲ್ಲಿ 894946 ಶಿಶುಗಳ ಜನನವಾದರೆ, 74 ಶಿಶುಗಳ ಮರಣವಾಗಿದೆ. 2020 ರಲ್ಲಿ 852874 ಶಿಶುಗಳ ಜನನವಾದರೆ, 44 ಶಿಶುಗಳ ಮರಣವಾಗಿದೆ. 2021 ರಲ್ಲಿ 876419ಶಿಶುಗಳ ಜನನವಾದರೆ, 68 ಶಿಶುಗಳ ಮರಣವಾಗಿದೆ. 2023 ರಲ್ಲಿ 810769 ಶಿಶುಗಳ ಜನನವಾದರೆ, 65 ಶಿಶುಗಳ ಮರಣವಾಗಿದೆ. 2023 ರಲ್ಲಿ 813275 ಶಿಶುಗಳ ಜನನವಾದರೆ, 64 ಶಿಶುಗಳ ಮರಣವಾಗಿದೆ. 2024ರ ನವೆಂಬರ್ ವರೆಗೆ 542183 ಶಿಶುಗಳ ಜನನವಾದರೆ, 44 ಶಿಶುಗಳ ಮರಣವಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply