ಬೆಂಗಳೂರು : ರಾಜ್ಯ ಸರ್ಕಾರ ಭೂಮಾಪನ ಶುಲ್ಕವನ್ನು ಏರಿಸಿದ್ದು, ಫೆಬ್ರುವರಿ 1 ರಿಂದಲೇ ಪರಿಷ್ಕೃತ ದರವನ್ನು ಜಾರಿ ಮಾಡಿದ್ದು, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಜಮೀನು ಮಾಲೀಕರಿಗೆ ದೊಡ್ಡ ಶಾಕ್ ನೀಡಿದಂತಾಗಿದೆ.
ಹೌದು, ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವೆಚ್ಚ, ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀಕರಿಗೆ ಕಂದಾಯ ಇಲಾಖೆ ವರ್ಗಾಯಿಸಿದ್ದು, ಭೂಮಾಪನ ಶುಲ್ಕದಲ್ಲಿ ಹತ್ತು ಪಟ್ಟಿನಿಂದ ನೂರು ಪಟ್ಟಿನಷ್ಟು ಏರಿಕೆ ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಭೂಮಾಪನದ ಪರಿಷ್ಕೃತ ಅರ್ಜಿ ಶುಲ್ಕ 2 ಎಕರೆಯವರೆಗೆ 1500 ರೂ. ಅದಕ್ಕಿಂತ ಹೆಚ್ಚು-ಪ್ರತಿ ಎಕರೆಗೆ 300 ರಂತೆ ಗರಿಷ್ಠ 3000 ಇದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.