Criminal Escape: ನಟೋರಿಯಸ್ ಕ್ರಿಮಿನಲ್ ಜೊತೆ ಎಸ್ಕೇಪ್ ಆಗಿದ್ದ ಪೋಲೀಸಪ್ಪ: ಹುಬ್ಬಳ್ಳಿ ಪೊಲೀಸ್ ಬಲೆಗೆ

ಹುಬ್ಬಳ್ಳಿ: ನಟೊರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸ್ ಹಾಗೂ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ. ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮಿತ್ ನಾಯಕ್ ಬಂಧಿತ ಪೊಲೀಸ್…

ಹುಬ್ಬಳ್ಳಿ: ನಟೊರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸ್ ಹಾಗೂ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ.

ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮಿತ್ ನಾಯಕ್ ಬಂಧಿತ ಪೊಲೀಸ್ ಸಿಬ್ಬಂದಿ. ಸುಮಾರು 12 ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಎಂಬಾತನನ್ನು ಜೈಲಿನಿಂದ ಹೊರಬಿಟ್ಟು ತಾನೂ ಆತನೊಂದಿಗೆ ಪರಾರಿಯಾಗಿದ್ದ.

ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಸ್ ಆರೋಪಿಯಾಗಿದ್ದಾನೆ. ಕೊಲೆ, ಕೊಲೆ ಯತ್ನ, ವಂಚನೆ, ಭೂಮಾಫಿಯಾ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಗೋವಾ ಕ್ರೈಂ ಬ್ರಾಂಚ್ ಪೊಲೀಸರು ಸುಲೇಮಾನ್ ನನ್ನು ಬಂಧಿಸಿದ್ದರು. ಈ ನಟೋರಿಯಸ್ ಕ್ರಿಮಿನಲ್ ಕಾವಲಿಗಾಗಿ ಕ್ರೈಂ ಬ್ರ್ಯಾಂಚ್‌ನ ಅಮಿತ್ ನಾಯಕ್‌ನನ್ನು ನೇಮಿಸಲಾಗಿತ್ತು.

Vijayaprabha Mobile App free

ಆದರೆ ಅಮಿತ್ ನಾಯಕ್, ಸುಲೇಮಾನ್ ಸಿದ್ದಿಕಿಯನ್ನು ಡಿ.13 ರಂದು ಕಸ್ಟಡಿಯಿಂದ ಬಿಟ್ಟಿದ್ದಲ್ಲದೇ ಆತನೊಂದಿಗೆ ತಾನೂ ಸಹ ಪರಾರಿಯಾಗಿದ್ದ. ಗೋವಾದಿಂದ ಎಸ್ಕೇಪ್ ಆಗಿದ್ದ ಅಮಿತ್ ನಾಯಕ್, ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಹಳೇ ಹುಬ್ಬಳ್ಳಿ ಪೊಲೀಸರು ಅಮಿತ್ ನಾಯಕ್ ನನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.