ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತಿದ್ದು, Jio 5G ಸೇವೆಗಳ ಮೊದಲ ಹಂತವು 2 ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ದೆಹಲಿ, ಮುಂಬೈ, ಕಲ್ಕತ್ತಾ & ಚೆನ್ನೈ ಸೇರಿದಂತೆ ಭಾರತದಲ್ಲಿ ಆಯ್ದ ಕೆಲ ಪ್ರದೇಶಗಳಲ್ಲಿ ಜಿಯೋ 5G ಸೇವ ಪ್ರಾರಂಭವಾಗಲಿದ್ದು, ಇಡೀ ದೇಶಕ್ಕೆ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಇದು ವಿಶ್ವದ ಅತ್ಯಂತ ದೊಡ್ಡ standalone 5ಜಿ ಸೇವೆ ಆಗಿರಲಿದ್ದು, ಇದರ ಜೊತೆಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿರುವ ಅಂಬಾನಿ 2.23 ಲಕ್ಷ ಜನರಿಗೆ ಹೊಸ ಕೆಲಸ ಸಿಗಲಿದೆ ಎಂದು ಹೇಳಿದರು.
ಇನ್ನು, 2023ರ ಅಂತ್ಯದ ವೇಳೆಗೆ ಪ್ರತಿ ಪಟ್ಟಣದಲ್ಲಿ Jio 5G ಸೇವೆಗಳು ಲಭ್ಯವಿರುತ್ತವೆ ಎಂದು AGMನಲ್ಲಿ ಘೋಷಿಸಲಾಯಿತು. ಇತರ ಆಪರೇಟರ್‌ಗಳಿಗೆ ಹೋಲಿಸಿದರೆ ತಮ್ಮ 5G ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. 5Gಯಲ್ಲಿ 2 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.