ನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್

ಚೆನ್ನೈ : ವಿಶ್ವದ ಕ್ರಿಕೆಟ್ ದಂತಕಥೆ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ‘800’ ಸಿನಿಮಾದ ತಮಿಳುನಾಡಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು.ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ನಟ ವಿಜಯ್ ಸೇತುಪತಿ ಅಭಿನಯಿಸುತ್ತಿರುವುದಕ್ಕೆ ಸೋಷಿಯಲ್…

muralitharan vijayaprabha news

ಚೆನ್ನೈ : ವಿಶ್ವದ ಕ್ರಿಕೆಟ್ ದಂತಕಥೆ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ‘800’ ಸಿನಿಮಾದ ತಮಿಳುನಾಡಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು.ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ನಟ ವಿಜಯ್ ಸೇತುಪತಿ ಅಭಿನಯಿಸುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಮಾಡಲಾಗಿತ್ತು. ಹಿರಿಯ ನಿರ್ದೇಶಕ ಭಾರತಿರಾಜ ಅವರು ವಿಜಯ್ ಸೇತುಪತಿ ಅವರಿಗೆ ಸಿನಿಮಾದಲ್ಲಿ ನಟಿಸದಂತೆ ಸಲಹೆ ನೀಡಿದ್ದರು.

ತಮ್ಮ ಜೀವನಾಧಾರಿತ ಸಿನಿಮಾವನ್ನು ತಮಿಳುನಾಡಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಪ್ರತಿಕ್ರಿಯಿಸಿದ್ದು,‘ನನಗೆ ವಿವಾದಗಳು ಹೊಸದೇನಲ್ಲ. ಕ್ರಿಕೆಟ್‌ನಲ್ಲಿ ನಾನು ಬಹಳಷ್ಟು ನೋಡಿದ್ದೇನೆ. ‘800’ ಚಿತ್ರದ ಉದ್ದೇಶವನ್ನು ಕೆಲವು ವರ್ಗಗಳು ಅರ್ಥ ಮಾಡಿಕೊಳ್ಳಬೇಕು. ನನ್ನ ಜೀವನವು ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು. ನನಗೆ ಏಳು ವರ್ಷದವನಿದ್ದಾಗ ನನ್ನ ತಂದೆ ತೀರಿಕೊಂಡರು. ನಾವು ಯುದ್ಧ ಪೀಡಿತ ಪ್ರದೇಶದಲ್ಲಿ ಭಯದಿಂದ ವಾಸಿಸುತ್ತ ಅನೇಕ ತೊಂದರೆಗಳನ್ನು ಎದುರಿಸಿದ್ದೇವೆ. ಬಾಲ್ಯದಿಂದಲೂ ನಾನು ಎದುರಿಸಿದ ಕಷ್ಟಗಳು, ಕ್ರಿಕೆಟ್‌ನಲ್ಲಿನ ಸಾಧನೆಗಳನ್ನು ‘800’ ಚಿತ್ರದಲ್ಲಿ ತೋರಿಸಲಾಗಿದೆ

‘ಶ್ರೀಲಂಕಾದ ತಮಿಳುಗನಾಗಿ ಹುಟ್ಟುವುದು ನನ್ನ ತಪ್ಪೇ?.ನಾನು ಒಂದು ವೇಳೆ ಭಾರತದಲ್ಲಿ ಜನಿಸಿದ್ದರೆ ಟೀಮ್ ಇಂಡಿಯಾ ಪರ ಆಡುತ್ತಿದ್ದೆ ನಾನು ತಮಿಳುಗರಿಗೆ ವಿರೋದಿಯಂದು ವಿವಾದವನ್ನು ಹುಟ್ಟುಹಾಕಿ ಅದಕ್ಕೆ ರಾಜಕೀಯ ಬಣ್ಣ ಬಳಿದಿದ್ದಾರೆ. . 2009 ರಲ್ಲಿ ಶ್ರೀಲಂಕಾದ ಪರಿಸ್ಥಿತಿಯ ಬಗ್ಗೆ ನಾನು ಹೇಳಿದ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ. ತಮಿಳುಗರ ನರಮೇಧಕ್ಕೆ ನಾನು ಬೆಂಬಲಿಸಿದ್ದೇನೆ ಎಂದು ಆರೋಪಿಸಲಾಗಿದೆ. ತಮಿಳರಲ್ಲಿ ಆತ್ಮವಿಶ್ವಾಸ ತುಂಬಲು ನನ್ನ ಕಥೆಯನ್ನು ಸಿನಿಮಾದಲ್ಲಿ ಹೇಳಲು ಬಯಸುತ್ತೇನೆ ” ಎಂದು ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರು ಹೇಳಿದ್ದಾರೆ.

Vijayaprabha Mobile App free

ಇದನ್ನು ಓದಿ: ಅಂತರ್ ಧರ್ಮ ವಿವಾಹ: ಬಾಲಿವುಡ್ ನಟ ಶಾರುಖ್ ಖಾನ್ ಧರ್ಮದ ಬಗ್ಗೆ ಪತ್ನಿ ಗೌರಿ ಖಾನ್ ಖಡಕ್ ಉತ್ತರ…?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.