Christmas | ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಿವು ಹೀಗಿವೆ
ಕ್ರಿಸ್ಮಸ್ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳು (visit places in Karnataka during Christmas)
- ಬೆಂಗಳೂರು
- ಮೈಸೂರು
- ಮಂಗಳೂರು
- ಕಾರ್ಕಳ
1. ಬೆಂಗಳೂರು
ಕ್ರಿಸ್ಮಸ್ & ಹೊಸ ವರ್ಷದ ಸಮಯದಲ್ಲಿ ಬೆಂಗಳೂರಿಗೆ ಖಂಡಿತವಾಗಿ ಭೇಟಿ ನೀಡಬಹುದು. ಸಿಲಿಕಾನ್ ಸಿಟಿಯಲ್ಲಿನ ಸ್ಟ್ರೀಟ್ & ಮಾಲ್ ಶಾಪಿಂಗ್, ರಾತ್ರಿ ಸಮಯದ ಲೈಟಿಂಗ್ ಕಣ್ಣಿಗೊಂದು ಹಬ್ಬ. ಹೆಸರಾಂತ ಸೇಂಟ್ ಮೇರಿಸ್ ಬೆಸಿಲಿಕಾ, ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ಹೋಲಿ ಟ್ರಿನಿಟಿ ಚರ್ಚ್, ಇನ್ವೆಂಟ್ ಜೀಸಸ್ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್ ಇತ್ಯಾದಿ ಚರ್ಚ್‌ಗಳಿಗೂ ಭೇಟಿ ನೀಡಬಹುದು.
ಇದನ್ನೂ ಓದಿ: NALCO Recruitment | NALCO ದಲ್ಲಿ 518 ವಿವಿಧ ಹುದ್ದೆಗಳಿಗೆ ನೇಮಕಾತಿ
2. ಮೈಸೂರು
ಮೈಸೂರಿನಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಇಲ್ಲಿನ ಸೇಂಟ್ ಫಿಲೋಮಿನಾಸ್ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬ ಜೋರಾಗಿ ಆಚರಿಸುತ್ತಾರೆ. ಲೈಟಿಂಗ್ಸ್ ಲೈವ್ ಈವೆಂಟ್ ಇತ್ಯಾದಿಯನ್ನು ಕಣ್ಣು೦ಬಿಕೊಳ್ಳಬಹುದು. ಸೇ೦ಟ್ ಅ೦ಟನಿ ಬೆಸಿಲಿಕಾ, ಸೇಂಟ್ ಬಾರ್ತಲೋಮಿವ್ ಚರ್ಚ್ ಗಳಿಗೂ ಭೇಟಿ ನೀಡಬಹುದಾಗಿದ್ದು, ಅರಮನೆ ಸೇರಿದಂತೆ ಇನ್ನೂ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.
3. ಮಂಗಳೂರು
ಬಜೆಟ್ ಫ್ರೆಂಡ್ಲಿ ಟ್ರಿಪ್ ಹೋಗುವ ಯೋಜನೆಯಲ್ಲಿದ್ದರೆ ಉಡುಪಿ ಮಂಗಳೂರು ಪ್ರವಾಸ ಬೆಸ್ಟ್ ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್, ಸೇಂಟ್ ಮೇರಿಸ್ ಬೆಸಿಲಿಕಾ, ಮೌಂಟ್ ರೋಸರಿ ಚರ್ಚ್‌ಗೆ ಭೇಟಿ ನೀಡಬಹುದು.
ಇದನ್ನೂ ಓದಿ: Congress government scam 2024 | 2024 ರಲ್ಲಿ ಸದ್ದು ಮಾಡಿದ ಕಾಂಗ್ರೆಸ್ ಸರ್ಕಾರದ ಹಗರಣಗಳಿವು
4. ಕಾರ್ಕಳ
ಇನ್ನು, ಕ್ರೈಸ್ತರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕಾರ್ಕಳದ ಇತಿಹಾಸ ಪ್ರಸಿದ್ಧ ಅತ್ತೂರಿನ ಸಂತ ಲಾರೆನ್ಸ್ ಚರ್ಚ್‌ಗೂ ಭೇಟಿ ನೀಡಬಹುದಾಗಿದ್ದು, ಇಲ್ಲಿ ಹಲವಾರು ಬೀಚ್, ಸುಪ್ರಸಿದ್ಧ ದೇವಾಲಯಗಳು, ಪಿಕ್‌ನಿಕ್ ಸ್ಪಾಟ್‌ಗಳಿಗೂ ಭೇಟಿ ನೀಡಬಹುದು. ಚಿಕ್ಕಮಗಳೂರು, ಕಾರವಾರ, ಮಡಿಕೇರಿ ಸೇರಿದಂತೆ ಇತರೆ ಸ್ಥಳಗಳಿಗೆ ಟ್ರಿಪ್ ಹೋಗುವ ಮೂಲಕ ಕ್ರಿಸ್ಮಸ್ ರಜೆಯನ್ನು ಎಂಜಾಯ್ ಮಾಡಬಹುದು.