ನವದೆಹಲಿ: ಅಗತ್ಯ ವಸ್ತುಗಳಾದ ತೈಲ, ಅಡುಗೆ ಎಣ್ಣೆ, ಎಲ್ ಪಿಜಿ ಗ್ಯಾಸ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದು, ಮದರ್ ಡೈರಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ₹2 ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಹೌದು, ಕೆಲ ದಿನಗಳ ಹಿಂದಷ್ಟೇ ಅಮುಲ್ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ₹2 ಏರಿಕೆ ಮಾಡಿದ್ದು, ಇದೀಗ ಮದರ್ ಡೈರಿ ಕೂಡ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೊಳ್ಳಲಿದ್ದು, ಪ್ರತಿ ಲೀಟರ್ ಹಾಲಿನ ಬೆಲೆ ₹44 ಆಗಲಿದೆ.
ದೆಹಲಿ-ಎನ್ಸಿಆರ್ ಹಾಗೂ ಇತರೆ ನಗರಗಳಲ್ಲಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್ಗೆ 2ರೂ ಏರಿಕೆಯಾಗಲಿದ್ದು, ಮುಂಬೈ, ಕಲ್ಕತ್ತಾ ಸೇರಿದಂತೆ ದೇಶದ ಒಟ್ಟು 11 ನಗರಗಳಲ್ಲಿ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೊಳ್ಳಲಿದೆ.
ಇನ್ನು, ಕೆಲವು ದಿನಗಳ ಹಿಂದೆ ನಂದಿನಿ ಡೈರಿ ಮಾತ್ರ ಹಾಲು, ಬೆಣ್ಣೆ ಹಾಗು ತುಪ್ಪದ ಬೆಲೆಯನ್ನು ಕಡಿಮೆ ಮಾಡಿತ್ತು.