ಮಂಕಿಪಾಕ್ಸ್ ಸೋಂಕು: ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ!

ಮಂಕಿಪಾಕ್ಸ್ ಸೋಂಕು ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದು, ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಡಬ್ಲ್ಯೂಎಚ್‌ಒ (WHO) ರಾಷ್ಟ್ರಗಳಲ್ಲಿ ನಾಲ್ಕು ಗುಂಪುಗಳಾಗಿ ಮಾಡಿ ಶಿಫಾರಸುಗಳನ್ನು ಘೋಷಿಸಿದೆ. ಯಾವುದೇ ಪ್ರಕರಣಗಳಿಲ್ಲದವರು, ಇತ್ತೀಚೆಗೆ ಪಾಸಿಟಿವ್ ಆದವರು, ಪ್ರಾಣಿಗಳಿಂದ ಮನುಷ್ಯರಿಗೆ…

monkeypox vijayaprabha news

ಮಂಕಿಪಾಕ್ಸ್ ಸೋಂಕು ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದು, ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಡಬ್ಲ್ಯೂಎಚ್‌ಒ (WHO) ರಾಷ್ಟ್ರಗಳಲ್ಲಿ ನಾಲ್ಕು ಗುಂಪುಗಳಾಗಿ ಮಾಡಿ ಶಿಫಾರಸುಗಳನ್ನು ಘೋಷಿಸಿದೆ.

ಯಾವುದೇ ಪ್ರಕರಣಗಳಿಲ್ಲದವರು, ಇತ್ತೀಚೆಗೆ ಪಾಸಿಟಿವ್ ಆದವರು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಿಕೆ ಹಾಗೂ ಲಸಿಕೆಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವವರ ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ. ಸಾಮಾಜಿವಾಗಿ ತೊಡಗಿಸಿಕೊಳ್ಳುವುದು ಹಾಗೂ ಅವರ ಮೇಲಿನ ಕಣ್ಗಾವಲನ್ನು ತೀವ್ರಗೊಳಿಸುವುದು ಇತ್ಯಾದಿ ಶಿಫಾರಸ್ಸುಗಳನ್ನು ನೀಡಿದೆ.

ಜಾಗತಿಕವಾಗಿ 75ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಐವರು ಮೃತಪಟ್ಟಿದ್ದಾರೆ. ಹಲವು ರಾಷ್ಟ್ರಗಳಿಗೆ ಸೋಂಕು ಅತಿ ವೇಗವಾಗಿ ಹರಡುತ್ತಿದೆ. ಇದು ಹರಡುತ್ತಿರುವ ವಿವಿಧ ವಿಧಾನಗಳ ಬಗ್ಗೆ ನಮಗೆ ಗೊತ್ತಿರುವುದು ತೀರಾ ಕಡಿಮೆ ಎಂದು ಡಬ್ಲ್ಯೂಎಚ್‌ಒ ಮಹಾನಿರ್ದೇಶಕರು ಹೇಳಿದ್ದಾರೆ.

Vijayaprabha Mobile App free

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.