ನವದೆಹಲಿ: ಸಂವೇದನಾಶೀಲ ನಿರ್ಧಾರ ತೆಗೆದುಕೊಂಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿ ಜ್ವಾಲೆಯನ್ನು 50 ವರ್ಷಗಳ ನಂತರ ನಂದಿಸಲಾಗುತ್ತಿದೆ.
ಹೌದು, 50 ವರ್ಷಗಳಿಂದ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಬೆಳಗುತ್ತಿರುವ ಅಮರ್ ಜವಾನ್ ಜ್ಯೋತಿ, ಶಾಶ್ವತವಾಗಿ ಸ್ಥಳಾಂತರವಾಗಿಲಿದ್ದು, ಗಣರಾಜ್ಯೋತ್ಸವಕ್ಕೂ ಮುನ್ನ ಈ ಜ್ವಾಲೆಯುನ್ನ ಇಂಡಿಯಾ ಗೇಟ್ ಬದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಬೆಳಗಲಿದೆ. ಅಮರ್ ಜವಾನ್ ಜ್ಯೋತಿಯನ್ನು 1971ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮ ಸೈನಿಕರ ಸ್ಮಾರಕವಾಗಿ ನಿರ್ಮಿಸಲಾಯಿತು.
ಇನ್ನು, ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ‘ಮೋದಿಯವರಿಗೆ ದೇಶಭಕ್ತಿ, ವೀರರ ತ್ಯಾಗ ಅರ್ಥವಾಗುತ್ತಿಲ್ಲ’ ಎಂದು ಟೀಕಿಸಿದ್ದಾರೆ. ಮಧ್ಯಾಹ್ನ 3.30ಕ್ಕೆ ಯುದ್ಧ ಸ್ಮಾರಕದಲ್ಲಿ ಜ್ಯೋತಿ ವಿಲೀನ ಕಾರ್ಯಕ್ರಮ ನಡೆಯಲಿದೆ