ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಜೂನ್ 21ರಿಂದ ಜುಲೈ 5ರವರೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಜೂನ್ 21-ಪ್ರಥಮ ಭಾಷೆ, ಜೂನ್ 24-ಗಣಿತ, ಜೂನ್ 28-ವಿಜ್ಞಾನ, ಜೂನ್ 30-ತೃತೀಯ ಭಾಷೆ, ಜುಲೈ 2-ದ್ವಿತೀಯ ಭಾಷೆ ಹಾಗು ಜುಲೈ 5-ಸಮಾಜ ವಿಜ್ಞಾನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೇ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಮಾತನಾಡಿದ , ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿತ್ತು, ಈಗ ಜೂನ್ 21ರಿಂದ ಅಧಿಕೃತವಾಗಿ ಪರೀಕ್ಷೆ ಆರಂಭಗೊಳ್ಳಲಿದ್ದು, ಪ್ರತಿಯೊಂದು ವಿಷಯದ ಪರೀಕ್ಷೆಯನ್ನು ಸೂಕ್ತ ಅಂತರವಿಟ್ಟು ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.
ಮಕ್ಕಳ ಮಾನಸಿಕ ಒತ್ತಡವನ್ನು ಹೆಚ್ಚಿಸದಂತೆ ಮತ್ತು ಆತಂಕಗೊಳ್ಳದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳ ಮೇಲಿದ್ದು, ಜೊತೆಗೆ ಕರೋನ ಸೋಂಕಿನಿಂದಾಗಿ ಕಲಿಕೆಯಲ್ಲಿ ಉಳಿಕೆಯಾಯಿತು ಎನ್ನುವ ಭಾವ ಮಕ್ಕಳಲ್ಲಿ ಬರದಂತೆ ವಿಷಯವನ್ನು ಶೇಕಡಾ 30 ರಷ್ಟು ಕಡಿತಗೊಳಿಸಿದ್ದು, ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬೋಧಿಸಲಾಗುವುದು ಎಂದು ಸಚಿವ ಎಸ್ ಸುರೇಶಕುಮಾರ್ ಅವರು ಹೇಳಿದರು.
ಇದನ್ನು ಓದಿ:ಹೂವಿನಹಡಗಲಿ ಮೈಲಾರಲಿಂಗೇಶ್ವರ ವರ್ಷದ ಭವಿಷ್ಯವಾಣಿ: ‘ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್’