ಹಾವೇರಿ: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಆರೋಪ ಕೇಸ್ ಸಂಬಂಧಿಸಿದಂತೆ ಚಿತ್ರರಂಗದಲ್ಲಿ ಮೊದಲು ಇಂತಹ ವಾತಾವರಣ ಇರಲಿಲ್ಲ. ಸಣ್ಣ ತಪ್ಪು ಮಾಡಿದರು ಅವರು ಪಶ್ಚತ್ತಾಪ ಪಡುತ್ತಿದ್ದರು ಎಂದು ಹಾವೇರಿ ನಗರದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಚಿತ್ರರಂಗಕ್ಕೆ ಡ್ರಗ್ಸ್ ಎಂಟ್ರಿಯಾಗಿರುವುದು ದುರದೃಷ್ಟಕರ, ಡ್ರಗ್ಸ್ ಚಿತ್ರರಂಗದಲ್ಲಿ ಮಾತ್ರ ಇಲ್ಲ, ಎಲ್ಲ ಕಡೆ ಇದೆ. ವ್ಯಾಪಾರ, ರಾಜಕೀಯ, ಚಿತ್ರರಂಗ, ಇಂಜಿನಿಯರ್ಸ್, ವೈದ್ಯರು ಹೀಗೆ ಎಲ್ಲ ರಂಗಗಳಲ್ಲಿಯೂ ಡ್ರಗ್ಸ್ ಇದೆ ಎಂದು ಬಿ ಸಿ ಪಾಟೀಲ್ ಹೇಳಿದ್ದಾರೆ.
ಚಿತ್ರರಂಗದವರು ಮಾಡಿದರೆ ಅದು ಬೇಗ ಎದ್ದು ಕಾಣುತ್ತೆ. ಚಿತ್ರರಂಗದವರನ್ನು ಹಲವಾರು ಫಾಲೋ ಮಾಡುತ್ತಿರುತ್ತಾರೆ. ಹೀಗಾಗಿ ಚಿತ್ರರಂಗದವರು ಜವಾಬ್ದಾರಿಯಿಂದಿರಬೇಕು. ಚಿತ್ರರಂಗದಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ. ಯಾರೋ ಮಾಡಿದ ತಪ್ಪಿನಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು. ಚಿತ್ರರಂಗದಲ್ಲಿ ಈಗಲೂ ಒಳ್ಳೆಯ ಜನರಿದ್ದಾರೆ ಎಂದು ಬಿ ಸಿ ಪಾಟೀಲ್ ಹೇಳಿದ್ದಾರೆ.
ಡ್ರಗ್ಸ್ ನಂಟು ಆರೋಪ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮದ್ ಅವರ ಬಗ್ಗೆ ಮಾದ್ಯಮದವರು ಕೇಳಿದ ಪ್ರಶ್ನೆಗೆ, ಶಾಸಕ ಜಮೀರ್ ಅಹಮದ್ ಅವರೇ ಎಲ್ಲವನ್ನು ಹೇಳಿದ್ದಾರೆ. ಅವರ ಬಗ್ಗೆ ಮತ್ತೆ ಪ್ರತ್ಯೇಕವಾಗಿ ನಾನು ಏನು ಹೇಳಲಿ. ಆರೋಪ ಸಾಬೀತಾದರೆ ಆಸ್ತಿ ಒಪ್ಪಿಸಲಿ, ಇಲ್ಲದಿದ್ರೆ ಬಿಡಲಿ ಎಂದು ಹಾವೇರಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ.
ಇದನ್ನು ಓದಿ: ಸಾಲಬಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ!