ರಾಯಪುರ: ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಪಟು ಮಿಲ್ಖಾ ಸಿಂಗ್ (90) ಅವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
ಕರೋನ ಸೋಂಕಿಗೆ ಒಳಗಾಗಿದ್ದ ಮಿಲ್ಕಾ ಸಿಂಗ್, ಈ ವಾರದ ಪ್ರಾರಂಭದಲ್ಲಿ ಕೊರೋನಾ ನೆಗೆಟಿವ್ ವರದಿ ಬಂದ ಬಳಿಕ, ಅವರನ್ನು ಕೋವಿಡ್ ಐಸಿಯು ವಾರ್ಡ್‌ನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು.
ಆದರೆ, ಮಿಲ್ಕಾ ಸಿಂಗ್ ಅವರು ಒಂದೆರಡು ದಿನಗಳ ನಂತರ ಸಾವನ್ನಪ್ಪಿದ್ದಾರೆ. 400 ಮೀಟರ್ ಓಟದಲ್ಲಿ ದಾಖಲೆ ಬರೆದಿದ್ದ ಮಿಲ್ಖಾ ಸಿಂಗ್, ಏಷ್ಯನ್ ಗೇಮ್ಸ್ ನಾಲ್ಕು ಬಾರಿ ಚಿನ್ನ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.