ಅಸ್ಸಾಂ ಬಳಿಕ ಪೆಟ್ರೋಲ್ ಪ್ರತಿ ಲೀಟರ್‌ಗೆ ₹5.4, ಡೀಸೆಲ್‌ಗೆ ₹5.1 ಇಳಿಕೆ ಮಾಡಿದ ಮೇಘಾಲಯ 

ಶಿಲ್ಲಾಂಗ್ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಆಸ್ಸಾಂ ರಾಜ್ಯ ಸರ್ಕಾರ ಇಳಿಕೆ ಮಾಡಿದ ಬಳಿಕ, ಇದೀಗ ಮೇಘಾಲಯ ಸರ್ಕಾರ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಇಳಿಕೆ ಮಾಡಿದೆ. ಪೆಟ್ರೋಲ್‌ಗೆ ಪ್ರತಿ…

petrol and diesel price vijayaprabha

ಶಿಲ್ಲಾಂಗ್ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಆಸ್ಸಾಂ ರಾಜ್ಯ ಸರ್ಕಾರ ಇಳಿಕೆ ಮಾಡಿದ ಬಳಿಕ, ಇದೀಗ ಮೇಘಾಲಯ ಸರ್ಕಾರ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಇಳಿಕೆ ಮಾಡಿದೆ.

ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ ₹5.4 ಮತ್ತು ಡೀಸೆಲ್‌ಗೆ ₹5.1 ಇಳಿಕೆ ಮಾಡಲಾಗಿದೆ ಎಂದು ಮೇಘಾಲಯ ಸಿಎಂ ಕಾನ್ರಾಡ್ ಕೆ. ಸಂಗ್ಮಾ ಅವರು ತಿಳಿಸಿದ್ದಾರೆ. ಈ ಮೂಲಕ ಪೆಟ್ರೋಲ್‌ ₹91.26 ನಿಂದ ₹85.86 ಆಗಿದ್ದರೆ, ಡೀಸೆಲ್‌ನ ಬೆಲೆ ₹86.23 ರಿಂದ ₹79.13 ಆಗಿದೆ.

ಇತ್ತೀಚಿಗೆ ಅಸ್ಸಾಂ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ₹5 ಇಳಿಕೆ ಮಾಡಿದ್ದು, ಈಗ ಮೇಘಾಲಯ ಸರ್ಕಾರವು ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಮಾಡಿದೆ. ಆದರೆ, ಕರ್ನಾಟಕದ ರಾಜ್ಯದೆಲ್ಲೆಡೆ ಇಂಧನ ದರವನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೆ ಅಂತ ಕಾದುನೋಡಬೇಕಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.