ಹೈದರಾಬಾದ್: ನಟ, ರಾಜಕಾರಣಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕರೋನ ಸೊಂಕು ದೃಢಪಟ್ಟಿದೆ. ತಮ್ಮ ಮುಂದಿನ ಆಚಾರ್ಯ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದ ಮೆಗಾಸ್ಟಾರ್ ಚಿರಂಜೀವಿ ಅವರಿಗೆಕರೋನ ಪಾಸಿಟಿವ್ ಎಂದು ದೃಢಪಟ್ಟಿದೆ.
ಈ ವಿಷಯವನ್ನು ಮೆಗಾಸ್ಟಾರ್ ಚಿರಂಜೀವಿ ಅವರೇ ಸ್ವತಃ ಟ್ವೀಟ್ ಮಾಹಿತಿ ತಿಳಿಸಿದ್ದಾರೆ. ‘ಆಚಾರ್ಯ ಸಿನಿಮಾ ಶೂಟಿಂಗ್ ಪ್ರಾರಂಭಿಸಲು ಕೋವಿಡ್ ಪರೀಕ್ಷೆ ಒಳಗಾಗಿದ್ದು, ರಿಸಲ್ಟ್ ಪಾಸಿಟಿವ್ ಎಂದು ದೃಢಪಟ್ಟಿದೆ. ನನಗೆ ಯಾವುದೇ ಕೋವಿಡ್ ಲಕ್ಷಣಗಳಿಲ್ಲ. ನಾನು ತಕ್ಷಣ ಹೋಂ ಕ್ಯಾರೆಂಟೈನ್ ಆಗಿದ್ದೇನೆ. ಕಳೆದ 4-5 ದಿನಗಳಿಂದ ನನ್ನನ್ನು ಭೇಟಿಯಾದ ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗಬೇಕೆಂದು ನಾನುವಿನಂತಿಸುತ್ತೇನೆ. ನನ್ನ ಆರೋಗ್ಯ ಸ್ಥಿತಿಯ ಬಗ್ಗೆ ಕಾಲಕಾಲಕ್ಕೆ ನಿಮಗೆ ಮಾಹಿತಿ ತಿಳಿಸುತ್ತೇನೆ ”ಎಂದು ಚಿರಂಜೀವಿ ಹೇಳಿದರು.
ನಟ ಮೆಗಾಸ್ಟಾರ್ ಚಿರಂಜೀವಿ ಮೂರು ದಿನಗಳ ಹಿಂದೆ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ಪ್ರವಾಹ ಪರಿಹಾರ ನೀಡಿದ್ದರು. ಅವರ ಜೊತೆ ನಟ ಅಕ್ಕಿನೇನಿ ನಾಗಾರ್ಜುನ ಇದ್ದರು. ಇನ್ನು ಭಾನುವಾರ ಚಿರಂಜೀವಿ ಟಿ ಆರ್ ಎಸ್ ಸಂಸದ ಸಂತೋಷ್ ಕುಮಾರ್ ಮತ್ತು ಅವರ ಪುತ್ರ ರಾಮ್‌ಚರಣ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ఆచార్య షూటింగ్ ప్రారంభించాలని,కోవిడ్ టెస్ట్ చేయించుకున్నాను. రిజల్ట్ పాజిటివ్. నాకు ఎలాంటి కోవిడ్ లక్షణాలు లేవు.వెంటనే హోమ్ క్వారంటైన్ అయ్యాను.గత 4-5 రోజులుగా నన్ను కలిసినవారందరిని టెస్ట్ చేయించుకోవాలిసిందిగా కోరుతున్నాను.ఎప్పటికప్పుడు నా ఆరోగ్య పరిస్థితిని మీకు తెలియచేస్తాను. pic.twitter.com/qtU9eCIEwp
— Chiranjeevi Konidela (@KChiruTweets) November 9, 2020