ದುಬೈ: ವಿಶ್ವದ ಅತೀ ದೊಡ್ಡ ಬಂದರು ಎನಿಸಿಕೊಂಡಿರುವ ದುಬೈನ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ಭಾರಿ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ.
ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತೀ ದೊಡ್ಡ ಮಾನವ ನಿರ್ಮಿತ ಆಳ ನೀರಿನಲ್ಲಿರುವ ಬಂದರು ಎನಿಸಿಕೊಂಡಿದ್ದು, ಹಡಗಿನಲ್ಲಿ ಭಾರಿ ಸ್ಫೋಟ ನಡೆದಿರುವುದರಿಂದ ಸಮೀಪದ ಮನೆಗಳ ಕಿಟಕಿಗಳು ಒಡೆದಿದ್ದು, ಸುತ್ತಮುತ್ತಲಿನ ಸರಕುಗಳಿಗೆ ಎಷ್ಟು ಹಾನಿಯಾಗಿದೆ ಎಂಬುದು ತಿಳಿದಿಲ್ಲ.
ವಿಶ್ವದ ಅತೀ ದೊಡ್ಡ ಬಂದರು ಎನಿಸಿಕೊಂಡಿರುವ ದುಬೈನ ಜೆಬೆಲ್ ಅಲಿ ಬಂದರಿನಲ್ಲಿ ಭಾರತೀಯ ಉಪಖಂಡ, ಆಫ್ರಿಕಾ, ಏಷ್ಯಾದಿಂದ ಸರಕುಗಳು ಬರುತ್ತವೆ ಎನ್ನಲಾಗಿದೆ.
A fire caused by an explosion within a container on board a ship at Jebel Ali Port has been brought under control; no casualities have been reported. pic.twitter.com/oMTaJhgEYd
— Dubai Media Office (@DXBMediaOffice) July 7, 2021