ತಾಳಿ ಕಟ್ಟುವ ಸಮಯದಲ್ಲಿ ಪರಾರಿಯಾದ ವರ; ವಧುವಿನ ಕುತ್ತಿಗೆ ತಾಳಿ ಕಟ್ಟಿದ ಮತ್ತೊಬ್ಬ ಯುವಕ

ಚಿಕ್ಕಮಗಳೂರು: ಮದುವೆಯ ಸಮಯದಲ್ಲಿ ವರ ಪರಾರಿಯಾದ ಕಾರಣ ಮತ್ತೊಬ್ಬ ಯುವಕ ವಧುವಿನ ಕುತ್ತಿಗೆ ತಾಳಿ ಕಟ್ಟಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತಾರಿಕರೆ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಿಂಧು ಮತ್ತು ನವೀನ್ ಎಂಬುವರಿಗೆ…

marriage vijayaprabha

ಚಿಕ್ಕಮಗಳೂರು: ಮದುವೆಯ ಸಮಯದಲ್ಲಿ ವರ ಪರಾರಿಯಾದ ಕಾರಣ ಮತ್ತೊಬ್ಬ ಯುವಕ ವಧುವಿನ ಕುತ್ತಿಗೆ ತಾಳಿ ಕಟ್ಟಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತಾರಿಕರೆ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಿಂಧು ಮತ್ತು ನವೀನ್ ಎಂಬುವರಿಗೆ ಹಿರಿಯರು ಮದುವೆ ನಿಶ್ಚಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ನಿನ್ನೆ ಅವರಿಬ್ಬರ ಮದುವೆಗೆ ಮುಹೂರ್ತ ಫಿಕ್ಸ್ ಮಾಡಿ ಅದ್ಧೂರಿ ಸಮಾರಂಭಕ್ಕೆ ವ್ಯವಸ್ಥೆ ಮಾಡಿದ್ದರು. ಸಂಬಂಧಿಕರೆಲ್ಲರೂ ಮದುವೆಗೆ ಬಂದಿದ್ದರು. ಬೆಳಗ್ಗೆಯಾದರೆ (ಮಂಗಳವಾರ) ಮದುವೆ ಇರುವುದರಿಂದ ಬಂದ ಎಲ್ಲ ಸಂಬಂಧಿಕರು ಸಂತೋಷದಿಂದ ಭೋಜನ ಕಾರ್ಯಕ್ರಮ ಆಚರಿಸಿದ್ದರು.

ಈ ಹಿನ್ನಲೆಯಲ್ಲಿ ಇನ್ನೇನು ಮದುವೆಯ ಕ್ಷಣವನ್ನು ಸಮೀಪಿಸುತ್ತಿರುವಾಗ ವರ ನವೀನ್ ಬೆಳಿಗ್ಗೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾನೆ. ಆದರೆ , ನವೀನ್ ಆಗಲೇ ಇನ್ನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣ ಆ ಯುವತಿ ತನ್ನ ಮದುವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ನವೀನ್ ಮದುವೆಗೆ ಕೆಲವು ಗಂಟೆಗಳ ಮೊದಲು ವಿವಾಹ ಮಂಟಪದಿಂದ ಪರಾರಿಯಾಗಿದ್ದಾನೆ.

ಇನ್ನೂ ಅನೇಕ ಕನಸುಗಳನ್ನು ಹೊತ್ತು ಹೊಸ ಜೀವನಕ್ಕೆ ಕಾಲಿಡಬೇಕಾದ ನವವಿವಾಹಿತೆ ಸಿಂಧು ಇದರಿಂದ ತೀವ್ರ ನಿರಾಶೆಗೆ ಒಳಗಾಗಿದ್ದರು. ಇನ್ನು ಆಕೆಯ ಜೀವನ ಏನಾಗಬಹುದು ಎಂಬ ಆತಂಕದಲ್ಲಿದ್ದ ಸಮಯದಲ್ಲಿ ಮದುವೆಗೆ ಸೋದರ ಸಂಬಂಧಿಯಾಗಿ ಬಂದಿದ್ದ ಚಂದ್ರ ಎಂಬ ವ್ಯಕ್ತಿ ಸಿಂಧುಳನ್ನು ಮದುವೆಯಾಗಲು ಮುಂದೆ ಬಂದಿದ್ದು, ಇದರಿಂದ ಹಿರಿಯರು ಅವರಿಬ್ಬರಿಗೆ ಮದುವೆ ಮಾಡಿಸಿದ್ದಾರೆ.

Vijayaprabha Mobile App free

ಇದನ್ನು ಓದಿ: ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಮೀಸಲು ಮಾರ್ಗಸೂಚಿ ಪ್ರಕಟ

ಇದನ್ನು ಓದಿ: ಪಿಪಿಎಫ್, ಸುಕನ್ಯಾ ಸಮೃಧಿ, ಪೋಸ್ಟ್ ಆಫೀಸ್ ಯೋಜನೆಗಳ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.