ಕಾಬುಲ್: ಅಫಘಾನಿಸ್ತಾನದ ಕ್ರಿಕೆಟಿಗ, ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಸಿದಿದ್ದ ಮುಜೀಬ್ ಉರ್ ರೆಹಮಾನ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 19 ವರ್ಷದ ಮಜೀಬ್ ಉರ್ ರೆಹಮಾನ್ ಅವರು ಐಪಿಎಲ್ ಮುಗಿಸಿ ತಮ್ಮ ದೇಶಕ್ಕೆ ಇಂತಿರುಗುತ್ತಿದ್ದಂತೆಯೇ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ.
ಮುಜೀಬ್ ಉರ್ ರೆಹಮಾನ್ ಅವರ ಮದುವೆಯಲ್ಲಿ ಅಫಘಾನಿಸ್ತಾನದ ಕ್ರಿಕೆಟಿಗರು ಕುಣಿದು ಕುಪ್ಪಳಿಸಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ 19 ನೇ ವರ್ಷಕ್ಕೆ ಮದುವೆಯಾಗಿರುವ ಮುಜೀಬ್ ಅವರು, ಅಫಘಾನಿಸ್ತಾನದ ಸಂವಿಧಾನದ ಪ್ರಕಾರ ತಮ್ಮ 18 ನೇ ವರ್ಷಕ್ಕೆ ಪುರುಷರು ಮದುವೆಯಾಗಬಹುದು ಎಂದು ತಿಳಿದು ಬಂದಿದೆ.
ಅತಿ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಲ್ಲಿ ಒಬ್ಬರೆನಿಸಿದ್ದಾರೆ. ಮದುವೆಯಾದ ಸಂಭ್ರದಲ್ಲಿರುವ ಐಪಿಎಲ್ ಟೂರ್ನಿಯನ್ನು ಮುಗಿಸಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುವ ಉತ್ಸಾಹದಲ್ಲಿದ್ದಾರೆ.
ಅಫಘಾನಿಸ್ತಾನದ ಕ್ರಿಕೆಟಿಗ ಮುಜೀಬ್ ಉರ್ ರೆಹಮಾನ್ ಅಂತರಾಷ್ತ್ರೀಯ ಕ್ರಿಕೆಟ್ ನಲ್ಲಿ 1 ಟೆಸ್ಟ್, 40 ಏಕದಿನ ಪಂದ್ಯ ಹಾಗು 19 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಮುಜೀಬ್ ಉರ್ ರೆಹಮಾನ್ ಅವರು ಟೆಸ್ಟ್ ನಲ್ಲಿ 1 ವಿಕೆಟ್, ಏಕದಿನ ಪಂದ್ಯಗಳಲ್ಲಿ 63 ವಿಕೆಟ್ ಹಾಗು ಟಿ-20 ಪಂದ್ಯಗಳಲ್ಲಿ 25 ವಿಕೆಟ್ ಗಳನ್ನೂ ಪಡೆದ ಸಾಧನೆ ಮಾಡಿದ್ದಾರೆ.
#Afghanistan cricket players dancing in @Mujeeb_R88 wedding’s party. @GbNaib pic.twitter.com/7ZC4nzphNR
— Jafar Haand (@jafarhaand) November 13, 2020