ಬೆಳಗಾವಿ: ಮರಾಠಿ ಅರ್ಥವಾಗದೇ, ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಬೆಳಗಾವಿಯಲ್ಲಿ ಮರಾಠಿ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.
ಮಹಾದೇವ್ ಹಲ್ಲೆಗೊಳಗಾದ ಕಂಡಕ್ಟರ್ ಆಗಿದ್ದಾನೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಮರಾಠಿ ಭಾಷೆಯಲ್ಲಿ ಟಿಕೆಟ್ ಕೇಳಿದ್ದಳು. ಕಂಡಕ್ಟರ್ ಮಹಾದೇವ್ ನನಗೆ ಮರಾಠಿ ಅರ್ಥವಾಗಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಬಸ್ಸಿನಲ್ಲಿದ್ದ ಮರಾಠಿ ಯುವಕರ ಗುಂಪೊಂದು ಬಸ್ ಅನ್ನು ನಿಲ್ಲಿಸಿ ಕಂಡಕ್ಟರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ.
ಸುಳೇಬಾವಿ-ಬಾಳೇಕುಂದ್ರಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಂಡಕ್ಟರ್ ಮಹಾದೇವ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.