Kodishri bhavishya : ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ತಮ್ಮ 92ನೇ ವಯಸ್ಸಿನಲ್ಲಿ ಗುರುವಾರ (ನಿನ್ನೆ) ನಿಧನರಾಗಿದ್ದು, ಕೋಡಿಶ್ರೀಗಳು (Kodishri) ನುಡಿದಿದ್ದ ‘ಮಾಜಿ ಪ್ರಧಾನಿ ಸಾವಿನ’ ಭವಿಷ್ಯ ನಿಜವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: BIG BREAKING | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ
ಹೌದು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಈ ನಡುವೆ ಕೋಡಿಮಠದ ಡಾ।। ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನುಡಿದಿದ್ದ ಭವಿಷ್ಯ ಕೂಡ ನಿಜವಾಗಿದೆ ಎನ್ನಲಾಗಿದೆ.
ಇದೆ ವರ್ಷ ಜೂನ್ 25 ರಂದು ಮಾತನಾಡಿದ್ದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಇಬ್ಬರು ಪ್ರಧಾನಿಗಳು ಸಾಯುತ್ತಾರೆ, ಸಾವು ನೋವುಗಳು ಸಂಭವಿಸುತ್ತವೆ, ದೊಡ್ಡ ದೊಡ್ಡವರಿಗೆ ಭಾರಿ ದುಃಖ, ನೋವು, ತಾಪ ಎದುರಾಗುತ್ತದೆ ಎಂದು ಹೇಳಿದ್ದರು. ಅವರು ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯ ನುಡಿದಿದ್ದರಾದರೂ, ವರ್ಷದ ಕೊನೆಯ ಹಂತದಲ್ಲಿ ಮನಮೋಹನ್ ಸಿಂಗ್ ನಿಧನದೊಂದಿಗೆ ಅವರು ನುಡಿದಿದ್ದ ಪ್ರಮುಖ ಮಾತು ನಿಜವಾಗಿದೆ.
ಇದನ್ನೂ ಓದಿ: Government holiday : ಇಂದು ರಾಜ್ಯಾದ್ಯಂತ ಸರ್ಕಾರಿ ರಜೆ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!