‘ಮೇಕ್ ಇನ್ ಇಂಡಿಯಾ’ ಜಪ; ಡಬಲ್‌ ಎಂಜಿನ್‌ ಸರ್ಕಾರ ಹಾಡಿಹೊಗಳಿದ ಪ್ರಧಾನಿ ಮೋದಿ

ಮಂಗಳೂರು: ಮೇಕ್ ಇನ್ ಇಂಡಿಯಾ ಬಲಪಡಿಸುವುದು ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ರಫ್ತು ಹೆಚ್ಚಾಗಬೇಕು. ವಿಶ್ವದಲ್ಲಿ ಸ್ಪರ್ಧಿಸಬೇಕು. ಸಾಗರ ಮಾಲಾ ಯೋಜನೆಯಿಂದ ಕರಾವಳಿ ಭಾಗದ ಶಕ್ತಿ ಹೆಚ್ಚಾಗಲಿದೆ.…

narendra modi vijayaprabha

ಮಂಗಳೂರು: ಮೇಕ್ ಇನ್ ಇಂಡಿಯಾ ಬಲಪಡಿಸುವುದು ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ರಫ್ತು ಹೆಚ್ಚಾಗಬೇಕು. ವಿಶ್ವದಲ್ಲಿ ಸ್ಪರ್ಧಿಸಬೇಕು. ಸಾಗರ ಮಾಲಾ ಯೋಜನೆಯಿಂದ ಕರಾವಳಿ ಭಾಗದ ಶಕ್ತಿ ಹೆಚ್ಚಾಗಲಿದೆ. 8 ವರ್ಷಗಳಿಂದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು, ದೇಶದಲ್ಲಿ ಬಡವರಿಗಾಗಿ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಡಬಲ್‌ ಎಂಜಿನ್‌ ಸರ್ಕಾರ ಹಾಡಿಹೊಗಳಿದ ಮೋದಿ:

Vijayaprabha Mobile App free

– ನಮ್ಮ ಡಬಲ್‌ ಇಂಜಿನ್‌ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ

– ಕರ್ನಾಟಕದ 30 ಲಕ್ಷಕ್ಕೂ ಅಧಿಕ ಮಂದಿಗೆ ಆಯುಷ್ಮಾನ್‌ ಭಾರತದ ಲಾಭ ಸಿಕ್ಕಿದೆ

– ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ

– ಬೆಂಗಳೂರು ಸ್ಯಾಟಲೈಟ್‌ ರಿಂಗ್‌ ರೋಡ್‌ ಸೇರಿ ಹಲವು ಕೆಲಸವಾಗಿದೆ

– ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗೆ 70 ಸಾವಿರ ಕೋಟಿ ವಿನಿಯೋಗವಾಗಿದೆ ಎಂದು ಪ್ರಧಾನಿ ಮೋದಿ ಡಬಲ್‌ ಎಂಜಿನ್‌ ಸರ್ಕಾರವನ್ನು ಹಾಡಿಹೊಗಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.