Mahalaya Amavasya : ಮಹಾಲಯ ಅಮಾವಾಸ್ಯೆ ಮಹತ್ವ, ಆಚರಣೆ ವಿಧಾನ

Mahalaya Amavasya : ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಕೊನೆಯ ದಿನವಾಗಿದ್ದು, ದಸರಾ ಹಬ್ಬಕ್ಕೆ ಮುನ್ನುಡಿಯಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, 15 ದಿನಗಳ ಅವಧಿಯಲ್ಲಿ ಪಿತೃಗಳು ಭೂಮಿಗೆ ಬರುತ್ತಾರೆ ಎನ್ನಲಾಗಿದ್ದು, ಅಮವಾಸ್ಯೆಯಂದು ಶಾಂತಿ &…

Mahalaya Amavasya : ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಕೊನೆಯ ದಿನವಾಗಿದ್ದು, ದಸರಾ ಹಬ್ಬಕ್ಕೆ ಮುನ್ನುಡಿಯಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, 15 ದಿನಗಳ ಅವಧಿಯಲ್ಲಿ ಪಿತೃಗಳು ಭೂಮಿಗೆ ಬರುತ್ತಾರೆ ಎನ್ನಲಾಗಿದ್ದು, ಅಮವಾಸ್ಯೆಯಂದು ಶಾಂತಿ & ಸಮೃದ್ಧ ಜೀವನಕ್ಕಾಗಿ ತರ್ಪಣ ನೀಡಲಾಗುತ್ತದೆ.

ಸರ್ವಪಿತೃ ಮೋಕ್ಷ ಅಮಾವಾಸ್ಯೆ

ದಂತಕಥೆಯ ಪ್ರಕಾರ,ವ್ಯಕ್ತಿಯು ಈ 15 ದಿನಗಳಲ್ಲಿ ತಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಲು ವಿಫಲವಾದರೆ ಅಥವಾ ಪಿತೃಗಳ ಮರಣದ ತಿಥಿಯ ಬಗ್ಗೆ ಅವರಿಗೆ ತಿಳಿದಿಲ್ಲದಿದ್ದರೆ, ಅವರು ‘ಸರ್ವಪಿತೃ ಮೋಕ್ಷ (ಮಹಾಲಯ) ಅಮಾವಾಸ್ಯೆ’ ದಿನದಂದು ಎಲ್ಲಾ ತರ್ಪಣ ಆಚರಣೆಗಳನ್ನು ಮಾಡಬಹುದು.

ಆಚರಣೆ ವಿಧಾನ

ಅಮಾವಾಸ್ಯೆಯ ದಿನ, ಬೇಗನೆ ಎದ್ದು ಆಚರಣೆಗಳನ್ನು ಮುಗಿಸಬೇಕು. ಅಂದು ಹಳದಿ ಬಟ್ಟೆಯನ್ನು ಧರಿಸಿ, ಬ್ರಾಹ್ಮಣರನ್ನು ಮನೆಗೆ ಆಹ್ವಾನಿಸಬೇಕು. ‘ಪಿತೃಗಳನ್ನು’ ಧೂಪ, ದೀಪ & ಹೂವುಗಳಿಂದ ಪೂಜಿಸಿ, ನೀರು & ಬಾರ್ಲಿಯ ಮಿಶ್ರಣ ನೀಡಬೇಕು. ಹಸು, ನಾಯಿ, ಕಾಗೆಗಳಿಗೆ ಆಹಾರವನ್ನು ನೀಡಿ. ವೃದ್ಧರಿಗೆ ಅನ್ನ, ಬಟ್ಟೆ & ದಕ್ಷಿಣೆಯನ್ನು ನೀಡಬೇಕು.

Vijayaprabha Mobile App free

ಅಮವಾಸ್ಯೆ ಸಮಯ

ಮಹಾಲಯ ಅಮವಾಸ್ಯೆ ತಿಥಿಯು, ಅಕ್ಟೋಬರ್ 01, ಬೆಳಗ್ಗೆ 09:39 ರಿಂದ ಆರಂಭವಾಗಿ, ಅಕ್ಟೋಬರ್ 03 ಬೆಳಗ್ಗೆ 12:18 ರವರೆಗೂ ಇರುತ್ತದೆ.

ವಿಷ್ಣುವಿನ ವಾಸಸ್ಥಾನ

ಭಗವದ್ಗೀತೆಯಲ್ಲಿ, ಶ್ರೀ ಕೃಷ್ಣನು ಹತ್ತನೇ ಅಧ್ಯಾಯದ 26 ನೇ ಶ್ಲೋಕದಲ್ಲಿ ಅರಳಿ ಮರವನ್ನು ತನ್ನ ರೂಪವೆಂದು ವಿವರಿಸಿದ್ದಾನೆ. ಹೀಗಾಗಿ ಅರಳಿ ಗಿಡವನ್ನು ನದಿ ದಡದಲ್ಲಿ, ದೇವಾಲಯಗಳಲ್ಲಿ ನೆಡುವುದರಿಂದ ಪೂರ್ವಜರು ಆಶೀರ್ವಾದ ನೀಡುತ್ತಾರೆ ಎನ್ನುವ ನಂಬಿಕೆಯಿದೆ.

ದುರ್ಗಾದೇವಿ ಅವರೋಹಣ

ಈ ದಿನವನ್ನು ದುರ್ಗಾದೇವಿಯು ಮಹಿಷಾಸುರ ರಾಕ್ಷಸನನ್ನ ಸೋಲಿಸಿದ ದಿನವೆಂದು ಪರಿಗಣಿಸಲಾಗಿದೆ. ಇದು ಭೂಮಿಯ ಮೇಲೆ ದುರ್ಗಾ ದೇವಿಯ ಅವರೋಹಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಅಪಾರ ಭಕ್ತಿ & ಉತ್ಸಾಹದಿಂದ ಪೂರ್ವಜರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.