Lumpy skin disease : ಏನಿದು ಚರ್ಮ ಗಂಟು ರೋಗ? ಚರ್ಮ ಗಂಟು ರೋಗ ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವೇ?

Lumpy skin disease : ದನ, ಎಮ್ಮೆ ಎತ್ತುಗಳಲ್ಲಿ ಕಂಡುಬರುವ ಚರ್ಮ ಗಂಟು ರೋಗವು ವೈರಸ್‌ನಿಂದ ಹರಡುವ ಖಾಯಿಲೆ. ಫಾಕ್ಸ್‌ವೈರಿಡೆ ಕುಟುಂಬಕ್ಕೆ ಸೇರಿದ, ಕ್ಯಾಪ್ರಿಫಾಕ್ಸ್ ವೈರಸ್ ಕುಲದ ಲಂಪಿ ಸ್ಕಿನ್ ಡಿಸೀಸ್ ವೈರಸ್‌ನಿಂದ ಈ…

Lumpy skin disease in cattle

Lumpy skin disease : ದನ, ಎಮ್ಮೆ ಎತ್ತುಗಳಲ್ಲಿ ಕಂಡುಬರುವ ಚರ್ಮ ಗಂಟು ರೋಗವು ವೈರಸ್‌ನಿಂದ ಹರಡುವ ಖಾಯಿಲೆ. ಫಾಕ್ಸ್‌ವೈರಿಡೆ ಕುಟುಂಬಕ್ಕೆ ಸೇರಿದ, ಕ್ಯಾಪ್ರಿಫಾಕ್ಸ್ ವೈರಸ್ ಕುಲದ ಲಂಪಿ ಸ್ಕಿನ್ ಡಿಸೀಸ್ ವೈರಸ್‌ನಿಂದ ಈ ಖಾಯಿಲೆ ಹರಡುತ್ತದೆ.

ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಅತಿ ವೇಗವಾಗಿ ಹರಡುವ ಈ ರೋಗಕ್ಕೆ ಸದ್ಯ ಯಾವುದೇ ನಿಖರವಾದ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಆದರೆ ರೋಗಲಕ್ಷಣಗಳನ್ನು ಆಧರಿಸಿ ಪಶುವೈದ್ಯರು ಚಿಕಿತ್ಸೆ ನೀಡುತ್ತಾರೆ. ಚರ್ಮ ಗಂಟು ರೋಗದಿಂದ ಇತ್ತೀಚೆಗೆ ಹಲವು ರಾಸುಗಳು ಸಾವನ್ನಪ್ಪುತ್ತಿವೆ.

ಇದನ್ನೂ ಓದಿ: PM Schemes: ವಿದ್ಯಾರ್ಥಿಗಳಿಗಾಗಿಯೇ ಟಾಪ್ 5 PM ಸ್ಕೀಮ್‌ಗಳು ಇಲ್ಲಿವೆ..!

Vijayaprabha Mobile App free

Lumpy skin disease : ಮಳೆಗಾಲದಲ್ಲಿ ರಾಸುಗಳಿಗೆ ಹೆಚ್ಚಾಗಿ ಹರಡುವ ಚರ್ಮ ಗಂಟು ರೋಗ

ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಚರ್ಮ ಗಂಟು ರೋಗವು ಮಳೆಗಾಲ ಮತ್ತು ಬೇಸಿಗೆಯಲ್ಲಿ ಹೆಚ್ಚಾಗಿ ಹರಡುತ್ತದೆ. ಮಳೆಗಾಲದಲ್ಲಿ ಉಂಟಾಗುವ ಸೋಂಕುಗಳಿಂದ ಮತ್ತು ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನದಿಂದ ರೋಗವು ವೇಗವಾಗಿ ಹರಡುವುದನ್ನು ಕಾಣಬಹುದು.

ತಗ್ಗು ಪ್ರದೇಶಗಳಲ್ಲಿ ಅಥವಾ ನೀರಿನ ಸಮೀಪವಿರುವ ಪ್ರದೇಶಗಳಲ್ಲಿ ಚರ್ಮ ಗಂಟು ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಸೊಳ್ಳೆ, ಉಣ್ಣಿ, ನೊಣಗಳು ಈ ರೋಗದ ಮುಖ್ಯ ಪ್ರಸಾರ ಮಾಧ್ಯಮಗಳಾಗಿವೆ. ಆದ್ದರಿಂದ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಿದೆ.

ಇದನ್ನೂ ಓದಿ: Diwali Bonus: ಈ ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್; ದೀಪಾವಳಿ ಬೋನಸ್ ಆಗಿ 30 ದಿನಗಳ ಸಂಬಳ ಘೋಷಣೆ..!

Lumpy skin disease : ಭಾರತದಲ್ಲಿ ಮೊದಲ ಬಾರಿಗೆ ಒಡಿಶಾದಲ್ಲಿ ಕಾಣಿಸಿಕೊಂಡ ಚರ್ಮ ಗಂಟು ರೋಗ

ಚರ್ಮ ಗಂಟು ರೋಗದ ಇರುವಿಕೆಯನ್ನು ವಿಶ್ವದಲ್ಲೆ ಮೊದಲ ಬಾರಿಗೆ 1929ರಲ್ಲಿ ಆಫ್ರಿಕಾದ ದಕ್ಷಿಣ ಪ್ರಾಂತ್ಯ ಮತ್ತು ಮಡಗಾಸ್ಕರ್‌ನಲ್ಲಿ ಪತ್ತೆ ಹಚ್ಚಲಾಯಿತು. 1989ರಲ್ಲಿ ಆಫ್ರಿಕಾ ದೇಶಗಳ ಹೊರಗೆ ಸಾಂಕ್ರಾಮಿಕವಾಗಿ ಹರಡಿ ಇಸ್ರೇಲ್ ದೇಶದಲ್ಲಿ ಕಾಣಿಸಿಕೊಂಡಿತು.

ಲಂಪಿ ಸ್ಕಿನ್ ಡಿಸೀಸ್ ವೈರಸ್ ಗಾಳಿಯ ಮುಖಾಂತರ ಈಜಿಪ್ಟ್‌ನ ಇಸ್ಮಾಯಿಲಿಯಾದಿಂದ ಇಸ್ರೇಲ್ ತುಂಬೆಲ್ಲ ಹರಡಿಕೊಂಡಿತು. ಭಾರತದಲ್ಲಿ ಮೊತ್ತಮೊದಲ ಬಾರಿಗೆ 2019ರಲ್ಲಿ ಒಡಿಶಾ ರಾಜ್ಯದ ರಾಸುಗಳಲ್ಲಿ ಕಾಣಿಸಿಕೊಂಡ ಚರ್ಮ ಗಂಟು ರೋಗ ದೇಶದೆಲ್ಲೆಡೆ ಹರಡಿದೆ.

ಇದನ್ನೂ ಓದಿ: ಕಾಲೇಜಿನ ತರಗತಿಯಲ್ಲಿಯೇ ಉಪನ್ಯಾಸಕಿ ಆತ್ಮಹತ್ಯೆ ಯತ್ನ: ಪ್ರಾಂಶುಪಾಲ, ಸಹೋದ್ಯೋಗಿಗಳ ಕಿರುಕುಳ ಆರೋಪ

Lumpy skin disease : ಚರ್ಮ ಗಂಟು ರೋಗ ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತ

ರಾಸುಗಳಿಗೆ ಚರ್ಮ ಗಂಟು ರೋಗವಿದ್ದರೆ, ಅದರ ಹಾಲನ್ನು ಸೇವಿಸುವುದು ಅಪಾಯಕರವಾಗಿದೆ ಎಂದು ನಂಬಲಾಗಿತ್ತು. ಆದರೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಹಿರಿಯ ಅಧಿಕಾರಿಯ ಪ್ರಕಾರ, ಚರ್ಮ ಗಂಟು ರೋಗ ಸೋಂಕಿತ ಜಾನುವಾರುಗಳಿಂದ ಹಾಲನ್ನು ಸೇವಿಸುವುದು ಸುರಕ್ಷಿತವಾಗಿದೆ.

ಇದು ಪ್ರಾಣಿಜನ್ಯವಲ್ಲದ ಸೋಂಕು ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಹಾಲನ್ನು ಕುದಿಸಿದ ನಂತರ ಅಥವಾ ಕುದಿಸದೆ ಸೇವಿಸಿದರೂ ಅದರ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು.

ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಚರ್ಮ ಗಂಟು ರೋಗದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಜಾನುವಾರುಗಳಲ್ಲಿ ಕಂಡುಬರುವ ಚರ್ಮ ಗಂಟು ರೋಗ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ವಕ್ಕರಿಸಿದೆ. ಈ ರೋಗದಿಂದ ಜಿಲ್ಲೆಯ ಜಾನುವಾರುಗಳ ಮಾರಣಹೋಮವೇ ನಡೆಯುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಈ ರೋಗದ ನಿರ್ವಹಣೆ ಹೇಗೆ ಮತ್ತು ಇದು ಹೇಗೆ ಹರಡುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.