ನವದೆಹಲಿ: ಹೊಸ ವರ್ಷದ ಗಿಫ್ಟ್ ಎನ್ನುವಂತೆ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ ಮಾಡಿವೆ. ವಾಣಿಜ್ಯ ಸಿಲೆಂಡರ್ ಮೇಲೆ 14.50 ರೂ. ಇಳಿಕೆ ಮಾಡಿದ್ದು, ಇದರಿಂದಾಗಿ ದೆಹಲಿಯಲ್ಲಿ ವಾಣಿಜ್ಯ ಸಿಲೆಂಡರ್‌ನ ಬೆಲೆ 1818.50 ಯಿಂದ 1804ರೂ.ಗೆ ಬಂದು ತಲುಪಿದೆ.
ಆದರೆ ಈ ದರ ಇಳಿಕೆ ಕೇವಲ ವಾಣಿಜ್ಯ ಸಿಲೆಂಡರ್ ಮೇಲೆ ಅನ್ವಯಿಸುವುದಾಗಿದ್ದು, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲವಾಗಿದೆ. ಅಂದರೆ 19 ಕೆಜಿ ಸಿಲೆಂಡರ್ ದರವನ್ನು ಮಾತ್ರ ಇಳಿಕೆ ಮಾಡಿದ್ದು, 14 ಕೆಜಿ ಸಿಲೆಂಡರ್ ದರಗಳು ಎಂದಿನಂತೆ ಇರಲಿವೆ.
ದೇಶದಾದ್ಯಂತ ವಾಣಿಜ್ಯ ಸಿಲೆಂಡರ್ ದರ ಇಳಿಕೆ ಅನ್ವಯವಾಗಲಿದ್ದು, ಈ ಹಿಂದಿನ ದರಕ್ಕಿಂತ 14.50 ಕಡಿತಗೊಂಡು ಸಿಲೆಂಡರ್‌ಗಳು ಲಭ್ಯವಾಗಲಿವೆ. ಹೀಗಾಗಿ ವಾಣಿಜ್ಯ ಸಿಲೆಂಡರ್ ಬಳಕೆಯ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗಲಿದೆ.




