ಬೆಂಗಳೂರು: ದಾಖಲೆ ಇದ್ದರೆ ಸಂಜೆಯೊಳಗೆ ಬಿಡುಗಡೆ ಮಾಡುವಂತೆ ನಟ ದರ್ಶನ್ ನಿರ್ದೇಶಕ ಇಂದ್ರಜಿತ್ ಅವರಿಗೆ ಸವಾಲು ಹಾಕಿದ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಮರು ಸವಾಲು ಹಾಕಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.
ದರ್ಶನ್ ಅವರು ವಿಚಲಿತರಾಗಿದ್ದಾರೆ. ಅವರು ನಾನು ಕೇಳಿದ ಪ್ರಶ್ನೆಗೆ ಉತ್ತರಿಸಲಿ. ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನೀವು ಗಂಡಸುತನ ಪ್ರೂ ಮಾಡಲು ಹೊಟೇಲ್ ಗೆ ಹೋಗಿದ್ರಾ? ಯಾರನ್ನೋ ಹೊಡೆಯುವುದು ಗಂಡಸುತನ ಅಲ್ಲ, ನಿಮ್ಮ ಡೈಲಾಗ್ ಗಳನ್ನು ಸಿನಿಮಾದಲ್ಲಿ ತೋರಿಸಿ ಎಂದು ದರ್ಶನ್ ಗೆ ಇಂದ್ರಜಿತ್ ಸವಾಲು ಹಾಕಿದ್ದಾರೆ.
‘ಹೀರೋಯಿಸಂ ಅನ್ನು ಸಿನಿಮಾದಲ್ಲಿ ಇಟ್ಟುಕೊಳ್ಳಲಿ’
ಹೀರೋಯಿಸಂ ಅನ್ನು ಸಿನಿಮಾದಲ್ಲಿ ಇಟ್ಟುಕೊಳ್ಳಲಿ. ಇದು ನಿಜ ಜೀವನ. ಸಾಕ್ಷಿಗಳನ್ನು ಪೊಲೀಸರ ಎದುರು ಇಡಬೇಕೇ ಹೊರತು ಗಂಡಸ್ತನ ನಿರೂಪಿಸಲು ಅಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನಟ ದರ್ಶನ್ ಗೆ ಇಂದು ಟಾಂಗ್ ನೀಡಿದ್ದಾರೆ.
ನಾನು ಬಳಸಿದ್ದು ಗೂಂಡಾ ಗಿರಿ ಪದ, ಗಾಂಡು ಗಿರಿ ಎಂದಿಲ್ಲ. ಕಲಾವಿದರು ಅನಕ್ಷರಸ್ಥರು ಎಂದಿರಲಿಲ್ಲ, ಸಮಾಜಕ್ಕೆ ಕನ್ನಡಿ, ಮಾದರಿಯಾಗಬೇಕು ಎಂದಿದ್ದೆ. ಇಂದೇ ಆಸ್ತಿ ವಿಚಾರ ಬಂದಿದೆ. ಮುಂದೆ ಏನು ಬರುವುದೋ ಎಂದು ಇಂದ್ರಜಿತ್ ಹೇಳಿದ್ದಾರೆ.