ಒಳ್ಳೆಯ ನಿದ್ರೆಗಾಗಿ ಹೀಗೆ ಮಾಡಿ..,
* ಒಳ್ಳೆಯ ನಿದ್ರೆಗಾಗಿ ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯಬೇಕು.
* ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಆರಾಮವಾಗಿ ಮಲಗಬಹುದು.
* ನೀವು ಊಟಕ್ಕೆ ಮಜ್ಜಿಗೆಯನ್ನು ತೆಗೆದುಕೊಂಡರೆ, ನೀವು ಚೆನ್ನಾಗಿ ಮಲಗಬಹುದು.
* ಬಾಳೆಹಣ್ಣು ಮತ್ತು ಚೆರ್ರಿಗಳನ್ನು ರಾತ್ರಿಯಲ್ಲಿ ತಿನ್ನಿ. ಒಳ್ಳೆಯ ನಿದ್ರೆ ಬರುತ್ತದೆ.
* ಬಾದಾಮಿ ತಿನ್ನುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತದೆ. ಇದರಿಂದಾಗಿ ಒಳ್ಳೆಯ ನಿದ್ರೆ ಬರುತ್ತದೆ.
ಮಲಗುವ ಮುನ್ನ ಹೀಗೆ ಮಾಡುವುದನ್ನು ಮರೆಯಬೇಡಿ:
* ಮಲಗುವ ಮುನ್ನ, ಊಟವಾದ ಮೇಲೆ ವಾಕಿಂಗ್ ಮಾಡಿ, ಮೊಬೈಲ್‌ನಿಂದ ದೂರವಿರಿ.
* ಮಲಗಿದಾಗ ಒಂದು ಕ್ಷಣ ಕಣ್ಣು ಮುಚ್ಚಿ ದಿನಚರಿ ಬಗ್ಗೆ ಮೆಲುಕುಹಾಕಿ, ದಿನದಲ್ಲಿನ ಖುಷಿಯ ವಿಚಾರಗಳನ್ನು ನೆನಪಿಸಿಕೊಳ್ಳಿ. ಇದರಿಂದ ಸುಖ ನಿದ್ರೆ ಬರುತ್ತದೆ.
* 2 ನಿಮಿಷಗಳ ಕಾಲ ಉಸಿರಾಟದ ಬಗ್ಗೆ ಗಮನಹರಿಸಿ, ನಂತರ ದೀರ್ಘ ಉಸಿರಾಟ ಮಾಡಿ ನಿದ್ರೆಗೆ ಜಾರಿ
* ಮಲಗುವ ಮುನ್ನ ನಿಮಗೆ ಇಷ್ಟವಾದ, ಹತ್ತಿರದ ವ್ಯಕ್ತಿಗಳನ್ನು ನೆನಪಿಸಿಕೊಂಡು ಮಲಗಿರಿ ಮತ್ತು ನಾಳೆಯ ಪ್ರಮುಖ ಕೆಲಸವನ್ನು ನೆನಪಿಸಿಕೊಳ್ಳಿ.