ಚನ್ನಪಟ್ಟಣ : ಪರಿಷತ್ ಸದಸ್ಯ (ಎಂಎಲ್ಸಿ) ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕೆಲದಿನಗಳ ಹಿಂದೆ ಗ್ರಾ.ಪಂ. ಪೂರ್ವಭಾವಿ ಸಭೆಯೊಂದರಲ್ಲಿ ಮಾತನಾಡಿರುವ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡತೊಡಗಿದೆ.
ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ -ಡಿ ಕೆ ಶಿವಕುಮಾರ್ ಇಬ್ಬರು ಸೇರಿ ಚನ್ನಪಟ್ಟಣದಲ್ಲಿ ನನ್ನನ್ನು ಸೋಲಿಸಿದರು. ಇದರಿಂದ ಮತದಾರರಿಗೆ ಮುಖ ತೋರಿಸಲು ಬೇಸರವಾಗಿ ನಾನು ಬೆಂಗಳೂರು ಸೇರಿದೆ ಎಂದು ಎಂ ಎಲ್ ಸಿ ಸಿ.ಪಿ ಯಾಗೇಶ್ವರ್ ಅವರು ಹೇಳಿದ್ದಾರೆ.
ಬರೀ ಚನ್ನಪಟ್ಟಣದಲ್ಲಿ ರಾಜಕೀಯ ಮಾಡಿಕೊಂಡಿದ್ದರೆ ಆಗದು. ಏನಾದರೂ ಮಾಡಬೇಕು ಎಂದು ಸ್ಕೆಚ್ ಹಾಕಿ ಎಚ್ ಡಿ ಕುಮಾರಸ್ವಾಮಿ ಅವರನ್ನ ಅಧಿಕಾರದಿಂದ ಇಳಿಸಿದೆ ಎಂದು ಚನ್ನಪಟ್ಟಣದಲ್ಲಿ ಸಿ ಪಿ ಯೋಗೀಶ್ವರ್ ಅವರು ಹೇಳಿದ್ದರು. ಸದ್ಯ ಯೋಗೀಶ್ವರ್ ಅವರ ಈ ಆಡಿಯೋ ಎಲ್ಲೆಡೆ ಸದ್ದುಮಾಡುತ್ತಿದೆ.