ಇಂದು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಜನ್ಮದಿನದ ಸಂಭ್ರಮ; ಗಣ್ಯರ ಶುಭಾಷಯ

ಬೆಂಗಳೂರು: ಇಂದು ಸೂಪರ್ ಸ್ಟಾರ್, ಕನ್ನಡಿಗ ರಜನೀಕಾಂತ್ ಅವರಿಗೆ 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮೂಲತಃ ಕರ್ನಾಟಕದವರಾದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ ನಂತರ ತಮಿಳು ಚಿತ್ರರಂಗದಲ್ಲಿ ಪ್ರವೇಶ…

rajinikanth vijayaprabha

ಬೆಂಗಳೂರು: ಇಂದು ಸೂಪರ್ ಸ್ಟಾರ್, ಕನ್ನಡಿಗ ರಜನೀಕಾಂತ್ ಅವರಿಗೆ 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮೂಲತಃ ಕರ್ನಾಟಕದವರಾದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ ನಂತರ ತಮಿಳು ಚಿತ್ರರಂಗದಲ್ಲಿ ಪ್ರವೇಶ ಪಡೆದು ವಿಶ್ವಾದ್ಯಂತ ಹೆಸರು ಗಳಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ರಜನೀಕಾಂತ್ ಅವರು ಕೇವಲ ತಮಿಳು ಮಾತ್ರವಲ್ಲದೆ ತೆಲುಗು,ಹಿಂದಿ ಹಾಗು ಕನ್ನಡ ಸಿನಿಮಾಗಳಲ್ಲೂ ಸಹ ಅಭಿನಯಿಸುವ ಮೂಲಕ ವಿಶಿಷ್ಟ ಅಭಿನಯ ಹಾಗು ಸ್ಟೈಲ್ ನಿಂದಲೇ ಏಷ್ಯಾದ 2ನೇ ಅತಿಹೆಚ್ಚು ಸಂಭಾವನೆ ಪಡೆಯುವ ಆಕ್ಟರ್ ಕೂಡ ಆಗಿದ್ದಾರೆ.ರಜನೀಕಾಂತ್ ಅವರು ಸೂಪರ್ ಸ್ಟಾರ್ ಆದರೂ ಸಹ ತುಂಬಾ ಸರಳ ಹಾಗು ಸಹಾಯ ಗುಣ ಹೊಂದಿರುವ ವ್ಯಕ್ತಿ.

ಇಂದು ಅವರ ಹುಟ್ಟುಹಬ್ಬವಾಗಿದ್ದು ಸಿ.ಟಿ ರವಿ, ಅರೋಗ್ಯ ಸಚಿವ ಕೆ ಸುಧಾಕರ್, ಶ್ರೀರಾಮುಲು ಸೇರಿದಂತೆ ನಟ, ನಟಿಯರು, ಗಣ್ಯರು, ಅಭಿಮಾನಿಗಳು ಸಹ ರಜನೀಕಾಂತ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Vijayaprabha Mobile App free

ರಜನೀಕಾಂತ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ ಸುಧಾಕರ್:

ಅರೋಗ್ಯ ಸಚಿವ ಸುಧಾಕರ್ ಅವರು ಟ್ವೀಟ್ ಮಾಡಿ, ಕರುನಾಡ ಮಣ್ಣಲ್ಲಿ ಹುಟ್ಟಿ, ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ನಟನಾ ಶೈಲಿಯಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಚಿರಯುವಕ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಜನ್ಮದಿನದ ಶುಭಾಶಯಗಳು. ಗುರು ರಾಯರು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಯಶಸ್ಸು, ಕೀರ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.