Krunal Pandya : ಸೌದಿ ಅರೇಬಿಯಾದ ಜೆಡ್ಡಾದಲ್ಲಿ IPL ಮೆಗಾ ಹರಾಜಿನ ಎರಡನೇ ದಿನದ ಪ್ರಕ್ರಿಯೆ ಆರಂಭವಾಗಿದೆ. ಹರಾಜಿನ ಮೊದಲ ದಿನದಲ್ಲಿ ಫ್ರಾಂಚೈಸಿಗಳು 72 ಆಟಗಾರರನ್ನು ಸ್ವಾಧೀನಪಡಿಸಿಕೊಂಡವು.
ಇವರಲ್ಲಿ 24 ಮಂದಿ ವಿದೇಶಿ ಆಟಗಾರರು. ತಂಡದ ಮಾಲೀಕರು ಆಟಗಾರರಿಗೆ ₹467.95 ಕೋಟಿ ಖರ್ಚು ಮಾಡಿದರೆ, ಪಂತ್ ಅವರನ್ನು 27 ಕೋಟಿ ರೂ.ಗೆ ಎಲ್ಎಸ್ಜಿ ಪಡೆದುಕೊಂಡಿತು. ನೀವು jiocinema ಮತ್ತು StarSports ನಲ್ಲಿ IPL ಆಕ್ಷನ್ ಲೈವ್ ವೀಕ್ಷಿಸಬಹುದು.
ಇದನ್ನೂ ಓದಿ: IPL Mega Auction 2025 All Teams Players List : ಮೊದಲ ದಿನದ ಹರಾಜಿನ ನಂತರ RCB ಸೇರಿದಂತೆ ಎಲ್ಲಾ 10 ತಂಡಗಳು ಹೀಗಿವೆ
Krunal Pandya : ಆರ್ಸಿಬಿಗೆ ಗ್ರ್ಯಾಂಡ್ ಎಂಟ್ರಿ ನೀಡಿದ ಕೃನಾಲ್ ಪಾಂಡ್ಯ..!
2025ರ ಐಪಿಎಲ್ ಮೇಗಾ ಹರಾಜಿನಲ್ಲಿ ಆರ್ಸಿಬಿ ನಿನ್ನೆ 6 ಆಟಗಾರರನ್ನು ಖರೀದಿಸಿದ್ದು, ಇಂದು ಮತ್ತೊಬ್ಬ ಟೀಂ ಇಂಡಿಯಾದ ಆಲ್ರೌಂಡರ್ ಅಟಗಾರನನ್ನು ಆರ್ಸಿಬಿ ಖರೀದಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಆಟಗಾರ ಕೃನಾಲ್ ಪಾಂಡ್ಯನನ್ನು ಆರ್ಸಿಬಿ 5.75 ಕೋಟಿ ರೂ ನೀಡಿ. ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಇನ್ನು ಕೃನಾಲ್ ಪಾಂಡ್ಯನನ್ನು ತಂಡದಲ್ಲೇ ಉಳಿಸಿಕೊಳ್ಳುವ ಅವಕಾಶವಿದ್ದ ಲಕ್ನೋ ಆಟಿಎಂ ಬಳಸುವಲ್ಲಿ ಆಸಕ್ತಿ ತೊರಲಿಲ್ಲ.
ಇದನ್ನೂ ಓದಿ: IPL Mega Auction 2025 RCB buys : ಮೊದಲ ದಿನ 6 ಆಟಗಾರರನ್ನು ಖರೀದಿಸಿದ ಆರ್ಸಿಬಿ …!