ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ | ಅರ್ಹತೆ, ಅರ್ಜಿ ಸಲ್ಲಿಕೆ, ಲಾಭವೇನು?

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ : 2011 ರಲ್ಲಿ ಪ್ರಾರಂಭಿಸಲಾದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಕರ್ನಾಟಕ ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತದೆ. ಮರಗಳನ್ನು ನೆಡಲು & ಅರಣ್ಯವನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸುವುದು ಈ…

krishi aranya protsaha yojana

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ : 2011 ರಲ್ಲಿ ಪ್ರಾರಂಭಿಸಲಾದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಕರ್ನಾಟಕ ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತದೆ. ಮರಗಳನ್ನು ನೆಡಲು & ಅರಣ್ಯವನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

3 ವರ್ಷ ಆರ್ಥಿಕ ಸಹಾಯ

ಈ ಯೋಜನೆಯಿಂದ ರೈತರು 3 ವರ್ಷಗಳ ಕಾಲ ಮರವನ್ನು ನೆಡಲು & ಪೋಷಿಸಲು ಆರ್ಥಿಕ ಸಹಾಯ ಪಡೆಯಬಹುದಾಗಿದೆ. ಹಣ್ಣುಗಳು, ಬೀಜಗಳು, ಉರುವಲು, ಕಂಬಗಳಿಂದ ಹಾಗೂ ಮರದ ಅಂತಿಮ ಉತ್ಪನ್ನದಿಂದ ರೈತರು ಹಣ ಗಳಿಸಬಹುದು. ನರ್ಸರಿಯಿಂದ ಸಬ್ಸಿಡಿ ದರದಲ್ಲಿ ನೀಡುವ ಸಸಿಗಳನ್ನು ರೈತರೇ ಖರೀದಿಸಬಹುದು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅರ್ಹತೆ, ಪ್ರಯೋಜನ

krishi aranya protsaha yojana

Vijayaprabha Mobile App free

ಈ ಯೋಜನೆಗೆ ಜಮೀನು ಹೊಂದಿರುವ ಕರ್ನಾಟಕದ ರೈತರು ಅರ್ಹರಾಗಿರುತ್ತಾರೆ. ಇಲಾಖೆಯು ಸಸಿಗೆ ಮೊದಲ ವರ್ಷದಲ್ಲಿ ₹35, ಎರಡನೇ ವರ್ಷದಲ್ಲಿ ₹40, ಮೂರನೇ ವರ್ಷದಲ್ಲಿ ₹50 ಪಾವತಿಸುತ್ತದೆ.

ಸಸಿಗಳಿಗೆ ಸಬ್ಸಿಡಿ ದರಗಳು

  • 5×8 ಮತ್ತು 6×9 ಗಾತ್ರದ ಸಸಿ: ಪ್ರತಿ ಸಸಿಗೆ ಒ೦ದು ರೂಪಾಯಿ.
  • 8×12 ಗಾತ್ರದ ಸಸಿ: ಪ್ರತಿ ಸಸಿಗೆ 3 ರೂಪಾಯಿ.
  • 10×16 & 14×20 ಗಾತ್ರದ ಸಸಿ: ಪ್ರತಿ ಸಸಿಗೆ 5 ರೂಪಾಯಿ.

ಒಬ್ಬ ರೈತ ಜಮೀನಿನಲ್ಲಿ ಹೆಕ್ಟೇರಿಗೆ 400 ಮರಗಳನ್ನು ಬೆಳೆಸಬಹುದು.

ಇದನ್ನೂ ಓದಿ: PM Kisan | ರೈತರಿಗೆ ಗುಡ್‌ನ್ಯೂಸ್‌, ಖಾತೆಗೆ 2,000 ರೂ; ಹಣ ಬೇಕಾದ್ರೆ ಈ ಕೆಲಸ ಮಾಡಿ!

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅರ್ಜಿ ಸಲ್ಲಿಕೆ ಹೇಗೆ?

ಯೋಜನೆಗೆ ಅರ್ಜಿ ಸಲ್ಲಿಸಲು, ರೈತರು ಹತ್ತಿರದ ಅರಣ್ಯ ವ್ಯಾಪ್ತಿಯ ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆ ಭರ್ತಿ ಮಾಡಿ, ನೋಂದಣಿ ಶುಲ್ಕ ₹10 ಹಾಗೂ ಅಗತ್ಯ ದಾಖಲೆಗಳನ್ನು ನೀಡಬೇಕು. ನಂತರ ಅರಣ್ಯಾಧಿಕಾರಿಗಳು ಗಿಡಗಳನ್ನು ವಿತರಣೆ ಮಾಡಿ, ಪ್ರತಿ ವರ್ಷ ರೈತರ ಜಮೀನಿಗೆ ಭೇಟಿ ನೀಡುತ್ತಾರೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಅರ್ಹವಲ್ಲದ ಸಸಿಗಳು

ಹೆಬ್ಬೇವು, ಶ್ರೀಗಂಧ, ತೇಗ, ಸಿಲ್ವರ್ ಓಕ್ ಜಾತಿಯ ಮರಗಳನ್ನು ಜಮೀನಿನಲ್ಲಿ ನೆಡಬಹುದು. ನೀಲಗಿರಿ, ಕ್ಯಾಸುರಿನಾ, ಎರಿಥಿನಾ, ರಬ್ಬರ್, ಸುಬಾಬುಲ್, ತೆಂಗಿನ ಕಾಯಿ, ಅಡಿಕೆ, ಕಿತ್ತಳೆ, ಸಿಟ್ರಸ್ ಜಾತಿಗಳು, ನಾಟಿ ಮಾವು ಈ ಸಸಿಗಳು ಯೋಜನೆಗೆ ಅರ್ಹವಲ್ಲ.

ಇದನ್ನೂ ಓದಿ: PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.