ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 54ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 60 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲವಿನಿಂದ ಕೆಕೆಆರ್ ಪ್ಲೇ ಆಫ್ ಕನಸು ಜೀವಂತವಾಗಿದ್ದು, ರಾಜಸ್ತಾನ್ ರಾಯಲ್ಸ್ ತಂಡ ಪ್ಲೇ ಆಫ್ ನಿಂದ ಹೊರಬಿದ್ದಿದೆ.
ಕೆಕೆಆರ್ ತಂಡ ನೀಡಿದ್ದ 192 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿ 60 ರನ್ ಗಳ ಅಂತರದಿಂದ ಸೋಲನುಭವಿಸಿತು. ರಾಜಸ್ತಾನ್ ರಾಯಾಲ್ಸ್ ಪರ ಬೆನ್ ಸ್ಟೋಕ್ಸ್ (18), ಜೋಸ್ ಬಟ್ಲರ್ (35), ರಾಹುಲ್ ತೇವತಿಯ(31), ಹಾಗು ಶ್ರೇಯಸ್ ಗೋಪಾಲ್(23) ರನ್ ಗಳುಸಿದರು. ಕೆಕೆಆರ್ ಪರ ಪ್ಯಾಟಿನ್ಸನ್ 4 ವಿಕೆಟ್, ಶಿವಂ ಮಾವಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಹಾಗಿ ನಗರಕೋಟೆ 1 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿದರು. ಕೆಕೆಆರ್ ಪರ ಶುಭ್ಮನ್ ಗಿಲ್ (36), ರಾಹುಲ್ ತ್ರಿಪಾಠಿ (39), ಮಾರ್ಗನ್ (68*) ಹಾಗು ಆಂಡ್ರೆ ರಸೆಲ್ (25) ರನ್ ಗಳಿಸಿದರು. ರಾಜಸ್ತಾನ್ ರಾಯಲ್ಸ್ ಪರ ರಾಹುಲ್ ತೇವತಿಯ 3 ವಿಕೆಟ್, ಕಾರ್ತಿಕ್ ತ್ಯಾಗಿ 2 ವಿಕೆಟ್, ಜೊಫ್ರಾ ಆರ್ಚರ್ ಹಾಗು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಜೇಮ್ಸ್ ಪ್ಯಾಟಿನ್ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.