ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 84ನೇ ಜಯಂತಿ ಆಚರಣೆ

Sri Siddeshwar Swamiji Jayanti : ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಮಹಾತ್ಮ ಗಾಂಧೀಜಿ ಪ್ರೌಢಶಾಲೆಯಲ್ಲಿ ಶತಮಾನದ ಸಂತ ಎರಡನೇ ಸ್ವಾಮಿ ವಿವೇಕಾನಂದ ಎಂದೇ ಹೆಸರುವಾಸಿ ಆದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 84ನೇ ಜಯಂತಿ…

Sri Siddeshwar Swamiji Jayanti : ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಮಹಾತ್ಮ ಗಾಂಧೀಜಿ ಪ್ರೌಢಶಾಲೆಯಲ್ಲಿ ಶತಮಾನದ ಸಂತ ಎರಡನೇ ಸ್ವಾಮಿ ವಿವೇಕಾನಂದ ಎಂದೇ ಹೆಸರುವಾಸಿ ಆದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 84ನೇ ಜಯಂತಿ ಕಾರ್ಯಕ್ರಮ ಜರುಗಿತು

ಇದನ್ನೂ ಓದಿ : Anna bhagya : ಹಣದ ಬದಲು ‘ದಿನಸಿ ಕಿಟ್’ ನೀಡಲು ಸರ್ಕಾರ ನಿರ್ಧಾರ..!?

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹೊನವಾಡ ಗ್ರಾಮದ ಖ್ಯಾತ ಪ್ರವಚನಕಾರರಾದ ಪರಮ ಪೂಜ್ಯ ಶ್ರೀ ಬಾಬುರಾವ್ ಮಹಾರಾಜರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಸರಳತೆಯ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದರು.ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಮ್ಮ ನಾಡು ಪುಣ್ಯ ಭೂಮಿ.. ಈ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ರಾಮಯ್ಯ ಜಿ ಲಕ್ಕುಂಡಿಮಠ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿ ನಾವು ಕನ್ನಡ ಮಣ್ಣಿನ ಋಣ ತೀರಿಸಬೇಕು.ಎಲ್ಲ ಭಾಷೆ ಕಲಿಯೋಣ ಅದು ಇಂದಿನ ದಿನಗಳಲ್ಲಿ ಅವಶ್ಯಕ ಆದರೆ ಕನ್ನಡ ಭಾಷೆ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಧೃಡ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬಾನಗರದ ಮಹಾತ್ಮ ಗಾಂಧೀಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾವಸಾಬ ಬಿರಾದಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕಾಶೀನಾಥ್ ಮೊಗಲಿ ವೇದಿಕೆಯ ಮೇಲಿದ್ದರು. ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದರು.
ಕುಮಾರಿ ಅಮೃತಾ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕರಾದ ಶ್ರೀ ಬೀರಪ್ಪ ವಿ ಖಂಡೇಕಾರ ಸ್ವಾಗತಿಸಿದರು ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನಿಂಗಪ್ಪ ಮ ಕಲಘಟಗಿ ವಂದಿಸಿದರು.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.