ಬಿಹಾರ ರಾಜಕೀಯ ಅಖಾಡದಲ್ಲಿ ನಡೆಯಲಿದೆ ಕನ್ನಡಿಗನ ಪವಾಡ

ಬೆಂಗಳೂರು: ಕರ್ನಾಟಕದ ಚಿಕ್ಕ ಹಳ್ಳಿಯೊಂದರಿಂದ ಹೊರಟು, ದೇಶದ ರಾಜಕೀಯ ಅಖಾಡದಲ್ಲಿ ತನ್ನದೇ ವಿಶಿಷ್ಟ ಗುರುತು ಮೂಡಿಸಿರುವ ಕನ್ನಡಿಗ ಸುನಿಲ್ ಕೆ.ಎಸ್. ಇಂದು ಬಿಹಾರ ಚುನಾವಣೆಯ ತಂತ್ರಗಾರಿಕೆಯ ಹಾದಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಕೊತ್ತಹುಡ್ಯ…

ಬೆಂಗಳೂರು: ಕರ್ನಾಟಕದ ಚಿಕ್ಕ ಹಳ್ಳಿಯೊಂದರಿಂದ ಹೊರಟು, ದೇಶದ ರಾಜಕೀಯ ಅಖಾಡದಲ್ಲಿ ತನ್ನದೇ ವಿಶಿಷ್ಟ ಗುರುತು ಮೂಡಿಸಿರುವ ಕನ್ನಡಿಗ ಸುನಿಲ್ ಕೆ.ಎಸ್. ಇಂದು ಬಿಹಾರ ಚುನಾವಣೆಯ ತಂತ್ರಗಾರಿಕೆಯ ಹಾದಿಯಲ್ಲಿ ಗಮನ ಸೆಳೆಯುತ್ತಿದ್ದಾರೆ.

Kannadiga Sunil K.S. Bihar Election
Kannadiga Sunil K.S. Bihar Election

ಚಿಂತಾಮಣಿ ತಾಲೂಕಿನ ಕೊತ್ತಹುಡ್ಯ ಗ್ರಾಮದಲ್ಲಿ ಜನಿಸಿ ಬೆಳೆದ ಈ ಯುವ ತಂತ್ರಜ್ಞ, ಇದೀಗ ದೇಶದ ರಾಜಕೀಯಕ್ಕೆ ಹೊಸ ಕಥನ ಬರೆಯುತ್ತಿದ್ದಾರೆ.

Vijayaprabha Mobile App free

ಸುನಿಲ್ ಅವರು ಬೆಂಗಳೂರಿನ ಎಎಂಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು. ಆದರೆ ಅವರ ಆಸಕ್ತಿ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ತಂತ್ರಗಾರಿಕೆಯಲ್ಲಿ ಇತ್ತು.

ರಾಜಕೀಯದ ತಂತ್ರಗಾರಿಕೆ!

ಕಳೆದ ಐದು ವರ್ಷಗಳಿಂದ ಅವರು ಚುನಾವಣೆಗಳ ಹಿನ್ನಲೆಯಲ್ಲಿ ಸ್ಟ್ರಾಟಜಿಗಳನ್ನು ರೂಪಿಸಿ, ಅಭ್ಯರ್ಥಿಗಳ ಗೆಲುವಿಗೆ ದಾರಿ ತೋರಿಸುತ್ತಿದ್ದಾರೆ. ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 15 ರಿಂದ 20 ಶಾಸಕರಿಗೆ ತಂತ್ರಗಾರರಾಗಿ ಕೆಲಸಮಾಡಿ, ಚುನಾವಣಾ ಪ್ರಚಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಇದರೊಂದಿಗೆ, ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮಹತ್ವದ ಪಾತ್ರವಹಿಸಿ, ಅಲ್ಲಿ 25ಕ್ಕೂ ಹೆಚ್ಚು ಶಾಸಕರಿಗೂ, ನಾಲ್ಕೈದು ಸಚಿವರಿಗೂ ಕ್ಯಾಂಪೇನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಹಲವು ನಾಯಕರಿಗೆ ತಂತ್ರಗಾರರಾಗಿ ಕೆಲಸ ಮಾಡಿದ್ದಾರೆ. ಸುನಿಲ್ ಅವರ ಶಾಂತ ಸ್ವಭಾವ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಅವರನ್ನು ಇತರರಿಂದ ವಿಭಿನ್ನರನ್ನಾಗಿಸಿದೆ.

ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣೆಯಲ್ಲಿಯೂ ಸಹ ತಮ್ಮ ತಂತ್ರಗಳಿಂದ ಪಕ್ಷಗಳಿಗೆ ಗೆಲುವು ತಂದುಕೊಟ್ಟ ಸುನಿಲ್ ಕೆ.ಎಸ್., ಈಗ ಬಿಹಾರದ ರಾಜಕೀಯ ರಣರಂಗದಲ್ಲಿ ತಮ್ಮ ಪಾದಾರ್ಪಣೆ ಮಾಡಿದ್ದಾರೆ. ಬಿಹಾರದ ವೆಸ್ಟ್ ಮತ್ತು ಈಸ್ಟ್ ಚಂಪಾರಣ ಜಿಲ್ಲೆಗಳ 11 ಕ್ಷೇತ್ರಗಳಲ್ಲಿ ಅವರು ಚುನಾವಣಾ ಕಾರ್ಯವನ್ನು ನಿಭಾಯಿಸುತ್ತಿದ್ದು, ಸ್ಥಳೀಯ ಸಮೀಕರಣಗಳನ್ನು ಅರಿತು ಹೊಸ ತಂತ್ರಗಳನ್ನು ಜಾರಿಗೆ ತರುತ್ತಿದ್ದಾರೆ.

ಕರ್ನಾಟಕದ ಒಂದು ಸಣ್ಣ ಹಳ್ಳಿಯಿಂದ ದೇಶದ ರಾಜಕೀಯ ನಕ್ಷೆಯಲ್ಲಿ ಗುರುತಿಸಿಕೊಳ್ಳುವ ತನಕದ ಸುನಿಲ್ ಅವರ ಪ್ರಯಾಣ ಪ್ರೇರಣಾದಾಯಕ. ಅವರ ಯಶಸ್ಸು ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಕನ್ನಡಿಗ ಯುವಕರ ಸಾಮರ್ಥ್ಯದ ಪ್ರತೀಕವೂ ಹೌದು. ಬಿಹಾರದಂತಹ ಮಹತ್ವದ ರಾಜ್ಯದಲ್ಲಿ ರಾಜಕೀಯದ ದಿಕ್ಕು ತಿರುಗಿಸುವಲ್ಲಿ ಕನ್ನಡಿಗನೊಬ್ಬನ ಪಾತ್ರ ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ.

ಸುನಿಲ್ ಕೆ.ಎಸ್. ಅವರ ಈ ಕಠಿಣ ಪರಿಶ್ರಮ ಮತ್ತು ತಂತ್ರಗಾರಿಕೆಯಿಂದ ದೇಶದ ರಾಜಕೀಯ ಅಲೆ ಸೃಷ್ಟಿಯಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಮುಖ ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಆಗಿ ಗುರುತಿಸಿಕೊಳ್ಳುವ ಸಾಧ್ಯತೆ ಸ್ಪಷ್ಟವಾಗುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply