ರಾಜಣ್ಣಗೆ ರಾಜೀನಾಮೆ ಸಂಕಷ್ಟ.. ಆ ಹೋರಾಟ ವಿರೋಧಿಸಿದ್ದೇ ಮುಳುವಾಯ್ತಾ? ರಾಜಣ್ಣ ಮೊದಲ ಪ್ರತಿಕ್ರಿಯೆ

K.N.Rajanna resignation : ಯಾವುದೇ ಫಿಲ್ಟರ್ ಇಲ್ಲದೇ, ಎಲ್ಲರ ವಿರುದ್ಧ ನೇರವಾಗಿ ಮಾತನಾಡುವ ಸಚಿವ K.N.ರಾಜಣ್ಣಗೆ ಈಗ ರಾಜೀನಾಮೆ ಸಂಕಷ್ಟ ಎದುರಾಗಿದೆ. ಇದೀಗ ಸಚಿವ ಕೆಎನ್‌ ರಾಜಣ್ಣ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು…

K.N. Rajanna

K.N.Rajanna resignation : ಯಾವುದೇ ಫಿಲ್ಟರ್ ಇಲ್ಲದೇ, ಎಲ್ಲರ ವಿರುದ್ಧ ನೇರವಾಗಿ ಮಾತನಾಡುವ ಸಚಿವ K.N.ರಾಜಣ್ಣಗೆ ಈಗ ರಾಜೀನಾಮೆ ಸಂಕಷ್ಟ ಎದುರಾಗಿದೆ. ಇದೀಗ ಸಚಿವ ಕೆಎನ್‌ ರಾಜಣ್ಣ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ.

ಹೌದು, ತಮ್ಮ ರಾಜೀನಾಮೆ ಸುದ್ದಿ ಬಗ್ಗೆ ರಾಜಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದು, ʻಹೈಕಮಾಂಡ್‌ ಯಾಕೆ ಗರಂ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಭೇಟಿ ನಂತರ ಪ್ರತಿಕ್ರಿಯೆ ನೀಡುತ್ತೇನೆʼ ಎಂದಿದ್ದಾರೆ. ಒಂದು ವೇಳೆ ರಾಜಣ್ಣ ರಾಜೀನಾಮೆ ನೀಡದಿದ್ದರೆ, ಅವರನ್ನು ಸಂಪುಟದಿಂದ ಉಚ್ಛಾಟನೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ರಾಜಣ್ಣಗೆ ರಾಜೀನಾಮೆ ಸಂಕಷ್ಟ.. ಆ ಹೋರಾಟ ವಿರೋಧಿಸಿದ್ದೇ ಮುಳುವಾಯ್ತಾ?

ರಾಹುಲ್ ಗಾಂಧಿ ಅವರ ಹೋರಾಟಕ್ಕೆ ವಿರುದ್ಧವಾಗಿ ಮಾತನಾಡಿದ್ದೇ, ರಾಜಣ್ಣನ ರಾಜಕೀಯ ಜೀವನಕ್ಕೆ ಮುಳುವಾಯ್ತಾ? ರಾಹುಲ್ ಗಾಂಧಿ, ವೋಟರ್ ID & ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ಆದರೆ, ಸಚಿವ ರಾಜಣ್ಣ ಇದನ್ನು ವಿರೋಧಿಸಿ, ಆಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ನಮಗೇ ಅವಮಾನ ಆಗಬೇಕು ಎಂದಿದ್ದರು. ಇದು ವಿವಾದಕ್ಕೆ ಕಾರಣವಾಯ್ತು.

Vijayaprabha Mobile App free

ಸಚಿವ ರಾಜಣ್ಣ ರಾಜೀನಾಮೆ ಬಗ್ಗೆ ಅವರ ಪುತ್ರ ಹೇಳಿದ್ದೇನು?

ಇನ್ನು ರಾಜೀನಾಮೆ ವಿಚಾರದ ಬಗ್ಗೆ ಸಚಿವ ಕೆಎನ್​ ರಾಜಣ್ಣ ಅವರ ಪುತ್ರ ಎಂಎಲ್​ಸಿ ರಾಜೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿ, ತಂದೆ ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ ನೀಡುತ್ತಾರೆ ಎಂಬುವುದು ಸುಳ್ಳು. ನಾನು ಈಗಷ್ಟೇ ನಮ್ಮ ತಂದೆಯ ಜೊತೆ ಮಾತನಾಡಿದ್ದೇನೆ. ಆ ರೀತಿ ಏನೂ ಇಲ್ಲ ಅಂತ ನಮ್ಮ ತಂದೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.