ಲೈಂಗಿಕವಾಗಿ ಬಳಸಿಕೊಂಡ ಮಹಿಳೆಯರಿಗೆ ಮಕ್ಕಳ ಮಾಂಸ ತಿನ್ನಿಸುತ್ತಿದ್ದ ಐಸಿಸ್‌ ಉಗ್ರರು

ಟೆಲ್‌ ಅವಿವ್‌ (ಇಸ್ರೇಲ್): ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯೆಂದು ಹೆಸರಾಗಿದ್ದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರರು ತಾವು ಅಪಹರಿಸಿ ಲೈಂಗಿಕ ಗುಲಾಮರನ್ನಾಗಿ ಬಳಸುತ್ತಿದ್ದ ಯೆಜಿದಿ ಜನಾಂಗದ ಮಹಿಳೆಯರಿಗೆ ಮಕ್ಕಳ ಮಾಂಸವನ್ನು ತಿನ್ನಿಸುತ್ತಿದ್ದರು ಎಂಬ…

ಟೆಲ್‌ ಅವಿವ್‌ (ಇಸ್ರೇಲ್): ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯೆಂದು ಹೆಸರಾಗಿದ್ದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರರು ತಾವು ಅಪಹರಿಸಿ ಲೈಂಗಿಕ ಗುಲಾಮರನ್ನಾಗಿ ಬಳಸುತ್ತಿದ್ದ ಯೆಜಿದಿ ಜನಾಂಗದ ಮಹಿಳೆಯರಿಗೆ ಮಕ್ಕಳ ಮಾಂಸವನ್ನು ತಿನ್ನಿಸುತ್ತಿದ್ದರು ಎಂಬ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.

ಇಸ್ರೇಲ್‌ ಸೇನಾಪಡೆ ಇತ್ತೀಚೆಗೆ ಗಾಜಾಪಟ್ಟಿಯಲ್ಲಿ ಐಸಿಸ್‌ ಉಗ್ರರ ಪಾಳೆಯದಿಂದ ರಕ್ಷಿಸಿದ ಯೆಜಿದಿ ಮಹಿಳೆ ಫೌಜಿಯಾ ಅಮಿನ್‌ ಸಿದೋ ಈ ಮಾಹಿತಿ ನೀಡಿದ್ದಾಳೆ.

ಯೆಜಿದಿ ಎಂಬುದು ಇರಾಕ್‌ನಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವಾಗಿದ್ದು, ಅಲ್ಲಿನ ನೂರಾರು ಮಹಿಳೆಯರನ್ನು ಐಸಿಸ್‌ ಉಗ್ರರು 2014ರಲ್ಲಿ ಅಪಹರಿಸಿ ಲೈಂಗಿಕ ಗುಲಾಮರನ್ನಾಗಿ ಇರಿಸಿಕೊಂಡಿದ್ದರು. ಅವರ ಪೈಕಿ ಒಬ್ಬ ಮಹಿಳೆಯನ್ನು ಇತ್ತೀಚೆಗೆ ಇಸ್ರೇಲ್‌ ಸೇನಾಪಡೆ ಗಾಜಾದಲ್ಲಿ ರಕ್ಷಿಸಿ, ಇರಾಕ್‌ಗೆ ಕಳುಹಿಸಿದೆ.

Vijayaprabha Mobile App free

ಫೌಜಿಯಾ ಬಿಚ್ಚಿಟ್ಟ ಭಯಾನಕ ಘಟನೆ:

‘ನಾನು 9 ವರ್ಷದವಳಾಗಿದ್ದಾಗ ಐಸಿಸ್‌ ಉಗ್ರರು ಅಪಹರಿಸಿದರು. ನನ್ನ ಜೊತೆಗೆ ಇನ್ನೂ ನೂರಾರು ಯೆಜಿದಿ ಜನಾಂಗದ ಜನರಿದ್ದರು. ನಮ್ಮನ್ನು ಅಪರಿಚಿತ ಸ್ಥಳಕ್ಕೆ ನಡೆಸಿಕೊಂಡು ಹೋಗಿ, 3 ದಿನ ಉಪವಾಸ ಇರಿಸಿದರು. ನಂತರ ನಮಗೆ ತಿನ್ನಲು ಅನ್ನ ಮತ್ತು ಮಾಂಸ ನೀಡಿದರು. ಮಾಂಸದ ರುಚಿ ವಿಚಿತ್ರವಾಗಿತ್ತು. ತಿಂದಾದ ಮೇಲೆ ನಮಗೆ ಅದು ಹತ್ಯೆಗೀಡಾಗಿದ್ದ ಯೆಜಿದಿ ಜನಾಂಗದ ಮಕ್ಕಳ ಮಾಂಸವೆಂದು ತಿಳಿಯಿತು. ಮಾಂಸಕ್ಕಾಗಿ ಕೊಂದ ಮಕ್ಕಳ ಫೋಟೋವನ್ನು ಕೂಡ ನಮಗೆ ತೋರಿಸಿ ‘ಇದೇ ಮಕ್ಕಳ ಮಾಂಸ ನೀವೀಗ ತಿಂದಿರುವುದು’ ಎಂದು ಹೇಳಿದರು’ ಎಂದು ಸಿದೋ ಹೇಳಿದ್ದಾಳೆ.
‘ಒಂದು ಫೋಟೋದಲ್ಲಿ ನಮ್ಮ ಜೊತೆಗೆ ಮಾಂಸ ಸೇವಿಸಿದ ಮಹಿಳೆಯೊಬ್ಬಳ ಮಗುವೇ ಇತ್ತು! ಮಾಂಸ ತಿಂದ ಅನೇಕರಿಗೆ ಹೊಟ್ಟೆನೋವು ಬಂದಿತ್ತು. ಒಬ್ಬ ಮಹಿಳೆ ತಾನು ಮಕ್ಕಳ ಮಾಂಸ ತಿಂದೆನೆಂದು ಹೃದಯಾಘಾತಕ್ಕೊಳಗಾಗಿ ಸತ್ತುಹೋದಳು’ ಎಂದೂ ಸಿದೋ ತಿಳಿಸಿದ್ದಾಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.