ವಿಲ್ ಬದಲಾವಣೆ ಮಾಡಲು ಸಾಧ್ಯವಿದೆ. ಈ ಹಿಂದೆ ಮಾಡಿದ್ದ ವಿಲ್ ಅನ್ನು ರದ್ದು ಮಾಡಿ ಹೊಸದಾಗಿ ವಿಲ್ ಮಾಡಿಸಿ ನೋಂದಾಯಿಸುವುದು ಒಳ್ಳೆಯದು. ಹೊಸ ವಿಲ್ ಮಾಡಿಸುವಾಗ, ಹಳೆಯ ವಿಲ್ ಅನ್ನು ರದ್ದು ಮಾಡಿರುವ ಬಗ್ಗೆ ವಿವರವಾಗಿ ತಿಳಿಸಿ.
ಯಾವುದೇ ವ್ಯಕ್ತಿ ಹಿಂದೆ ಮಾಡಿದ್ದ ವಿಲ್ ನಲ್ಲಿ ಹಲವಾರು ಮಾರ್ಪಾಟು ತರುವ ಸಂದರ್ಭದಲ್ಲಿ ಕೋಡಿಸಿಲ್ ಮಾಡುವುದಕ್ಕಿಂತ ಹೊಸ ವಿಲ್ ಬರೆಸುವುದು ಉತ್ತಮ. ಏನೇ ಆದರೂ ನಿಮ್ಮ ಅಂತಿಮ ವಿಲ್ ಮಾತ್ರ ಊರ್ಜಿತವಾಗುತ್ತದೆ.
ಒಬ್ಬರಿಗೆ ಮಾತ್ರ ಸ್ವಯಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದೇ?
ಸ್ವಯಾರ್ಜಿತ ಆಸ್ತಿಯನ್ನು ತನ್ನ ಜೀವಿತ ಕಾಲದಲ್ಲಿ ಒಬ್ಬ ವ್ಯಕ್ತಿ ಹೇಗೆ ಬೇಕಾದರೂ ವಿಲೇವಾರಿ ಮಾಡಬಹುದು. ಯಾರಿಗೆ ಬೇಕಾದರೂ ವಿಲ್ ಮಾಡಬಹುದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ.
ಕೋರ್ಟಿನಲ್ಲಿ ಪ್ರಕರಣ ಬಾಕಿ ಇರುವಾಗ ಸ್ವಯಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದು. ಪ್ರಕರಣ ನಡೆಯುತ್ತಿರುವಾಗ ವಿಲ್ ಮಾಡಿದವರು ಸೋತರೆ, ಯಾರಿಗೆ ವಿಲ್ ಮಾಡಿರುತ್ತಾರೋ ಅವರಿಗೆ ಯಾವ ಹಕ್ಕೂ ಬರುವುದಿಲ್ಲ.