ಇಂದು ಐಪಿಎಲ್ ಮಿನಿ ಹರಾಜು; 87 ಸ್ಥಾನಕ್ಕೆ 405 ಆಟಗಾರರ ಸ್ಪರ್ಧೆ; ಹರಾಜಿನಲ್ಲಿರುವ ಟಾಪ್‌ ಆಟಗಾರರು ಇವರೇ..!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2023 ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಕೇರಳದ ಕೊಚ್ಚಿಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದೆ. ಈ ಮಿನಿ ಹರಾಜಿನಲ್ಲಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಫ್ರಾಂಚೈಸಿಗಳು 405…

ipl-auction

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2023 ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಕೇರಳದ ಕೊಚ್ಚಿಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದೆ. ಈ ಮಿನಿ ಹರಾಜಿನಲ್ಲಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಫ್ರಾಂಚೈಸಿಗಳು 405 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿವೆ.

87 ಸ್ಥಾನಕ್ಕೆ 405 ಆಟಗಾರರ ಸ್ಪರ್ಧೆ

ಈ ಹರಾಜಿನಲ್ಲಿ ಗರಿಷ್ಠ 87 ಆಟಗಾರರಿಗೆ ಅವಕಾಶ ಸಿಗಲಿದ್ದು, ಸಾಗರೋತ್ತರ ಆಟಗಾರರಿಗೆ 30 ಸ್ಲಾಟ್‌ಗಳನ್ನು ನೀಡಿದರೆ, ಭಾರತದ ಆಟಗಾರರು 57 ಸ್ಲಾಟ್‌ಗಳಿಗೆ ಸ್ಪರ್ಧಿಸಲಿದ್ದಾರೆ. ಒಟ್ಟು 405 ಶಾರ್ಟ್‌ಲಿಸ್ಟ್ ಆಟಗಾರರನ್ನು 5 ಸೆಟ್‌ಗಳಾಗಿ ವಿಂಗಡಿಸಲಾಗಿದೆ.

Vijayaprabha Mobile App free

ಇನ್ನು, 119 ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 282 ಆಟಗಾರರು ಮೊದಲ ಬಾರಿಗೆ ಐಪಿಎಲ್‌ ಆಡುತ್ತಿದ್ದಾರೆ. 19 ಮಂದಿಯ ಮೂಲಬೆಲೆ 2 ಕೋಟಿ ರೂ. ಆಗಿದ್ದು, 1.5 ಕೋಟಿ ರೂ. ಮೂಲ ಬೆಲೆಯ 11 ಆಟಗಾರರು ಸ್ಪರ್ಧೆಯಲ್ಲಿದ್ದಾರೆ.

IPL ಹರಾಜಿನಲ್ಲಿರುವ ಟಾಪ್‌ ಆಟಗಾರರು:

* ಮಯಾಂಕ್‌ ಅಗರ್ವಾಲ್:‌ ಪಂಜಾಬ್‌ ಕಿಂಗ್ಸ್‌ ತಂಡದ ಮಾಜಿ ನಾಯಕ
* ಬೆನ್‌ ಸ್ಟೋಕ್ಸ್:‌ ವಿಶ್ವ ಶ್ರೇಷ್ಠ ಆಲ್‌ರೌಂಡರ್‌, ಟಿ20 ವಿಶ್ವಕಪ್‌ ಫೈನಲ್‌ನಲ್ಲೂ ಚಾಂಪಿಯನ್‌ ಆಟ
* ಸ್ಯಾಮ್‌ ಕರ್ರನ್:‌ ಇಂಗ್ಲೆಂಡ್‌ನ ಪ್ರತಿಭಾನ್ವಿತ ಆಲ್‌ರೌಂಡರ್.‌ ಡೆತ್‌ ಓವರ್‌ನ ಅತ್ಯುತ್ತಮ ಬೌಲರ್.‌
* ಹ್ಯಾರಿ ಬ್ರೂಕ್:‌ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್‌. ಟಿ20ಯಲ್ಲಿ 148ರ ಸ್ಟ್ರೈಕ್‌ ರೇಟ್.‌
* ಕ್ಯಾಮರೊನ್‌ ಗ್ರೀನ್: ಆಸೀಸ್‌ ಆಲ್‌ರೌಂಡರ್.‌ ಸ್ಫೋಟಕ ಬ್ಯಾಟಿಂಗ್‌ಗೆ ಖ್ಯಾತಿ ಬ್ಯಾಟರ್.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.