RCB not buys karnataka players : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿಐಪಿಎಲ್ 2025 ರ ಮೆಗಾ ಹರಾಜುನಡೆಯುತ್ತಿದ್ದು, ಕರ್ನಾಟಕ ಮೂಲದ ಟೀಂ ಇಂಡಿಯಾದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಖರೀದಿಸಿದೆ.
ಹೌದು, ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಆದರೆ, ಕಳೆದ ಸೀಸನ್‌ನಲ್ಲಿ ರಾಹುಲ್ ಅವರು ಎಲ್‌ಎಸ್‌ಜೆ ಮ್ಯಾನೇಜ್‌ಮೆಂಟ್ ಜತೆಗೆ ಸಾಕಷ್ಟು ಮನಃಸ್ತಾಪ ಮೂಡಿತ್ತು. ಹೀಗಾಗಿ, ಮುಂದಿನ ಸೀಸನ್‌ನಲ್ಲಿ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಅದೇರೀತಿ ಆರ್‌ಸಿಬಿ ಆರಂಭದಲ್ಲಿ ಬಿಡ್ ಮಾಡಿದ್ದರೂ ಕೊನೆಗೆ ಡೆಲ್ಲಿ ಟೀಂ ಖರೀದಿ ಮಾಡಿದೆ.
ಇದನ್ನೂ ಓದಿ: IPL Mega Auction 2025 RCB buys : ಮೊದಲ ದಿನ 6 ಆಟಗಾರರನ್ನು ಖರೀದಿಸಿದ ಆರ್‌ಸಿಬಿ …!
RCB not buys karnataka players : ಕನ್ನಡಿಗರನ್ನು ಕೈಬಿಟ್ಟ RCB; ಅಭಿಮಾನಿಗಳ ಭಾರೀ ಆಕ್ರೋಶ
ಕೆ.ಎಲ್ ರಾಹುಲ್ ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ನೀಡಿ ಖರೀದಿ ಮಾಡಿದೆ. ಕೆ.ಎಲ್ ರಾಹುಲ್ ಸೇರಿದಂತೆ ಕೈ ಬಿಟ್ಟಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಿಗರ ಭಾವನೆಗಳೊಂದಿಗೆ ಯಾಕೆ ಆಟ ಆಡುತ್ತೀರಿ? ನಾನ್ ಕನ್ನಡಿಗರ ಟೀಮ್ ಅನ್ನು ಯಾಕೆ ಸಪೋರ್ಟ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಕನ್ನಡಿಗರಿಗೆ ಅಲ್ಲದೇ ಮತ್ಯಾರಿಗೆ ದುಡ್ಡು ಸುರಿಯಬೇಕು ಅಂತಿದ್ದೀರಿ ಎಂದು ಕೆಂಡಕಾರಿದ್ದಾರೆ.
ಇದನ್ನೂ ಓದಿ: Rishabh Pant । ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಪಂತ್: ಬರೋಬ್ಬರಿ 27 ಕೋಟಿಗೆ ಲಕ್ನೋ ಸೂರ್ ಜೈಟ್ಸ್ ಖರೀದಿ
ಇನ್ನು, ಐಪಿಎಲ್ ಆಕ್ಷನ್ ಮೊದಲ ದಿನ ಕನ್ನಡಿಗರಾದ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದರೆ, ಪ್ರಸಿದ್ಧ್ ಕೃಷ್ಣ ಅವರನ್ನು ಗುಜರಾತ್ ರೂ.9.50 ಕೋಟಿಗೆ,ಕರುಣ್ ನಾಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ರೂ.50 ಲಕ್ಷಕ್ಕೆ ಸ್ವಾಧೀನಪಡಿಸಿಕೊಂಡಿತು. ಅಭಿನವ್ ಮನೋಹರ್ ಗೆ ರೂ. 3.20 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಪಡೆದುಕೊಂಡಿದೆ.
ಇನ್ನು, ಮೊದಲ ದಿನ ದೇವದತ್ ಪಡಿಕ್ಕಲ್ ಅನ್ ಸೋಲ್ಡ್ ಆಗಿದ್ದರೆ, ಶ್ರೇಯಸ್ ಗೋಪಾಲ್ ಮಾರಾಟವಾಗದೆ ಉಳಿದುಕೊಂಡಿದ್ದಾರೆ.