ಭುವಿ, ಪಾಂಡ್ಯ ದಾಳಿಗೆ ತತ್ತರಿಸಿದ ಪಾಕ್; ಪಾಕಿಸ್ತಾನದ ವಿರುದ್ದ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ

ಏಷ್ಯಾ ಕಪ್ ಭಾಗವಾಗಿ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಹೌದು, ಎದುರಾಳಿ ಪಾಕ್ ನೀಡಿದ್ದ 148 ರನ್‌ಗಳ ಬೆನ್ನತ್ತಿದ ಭಾರತ, 19.4…

India vs Pakistan match

ಏಷ್ಯಾ ಕಪ್ ಭಾಗವಾಗಿ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಹೌದು, ಎದುರಾಳಿ ಪಾಕ್ ನೀಡಿದ್ದ 148 ರನ್‌ಗಳ ಬೆನ್ನತ್ತಿದ ಭಾರತ, 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟ ಅನುಭವಿಸಿ, ಗೆಲುವಿನ ನಗೆ ಬೀರಿತು. ಭಾರತದ ಪರ, ರೋಹಿತ್ 12, ವಿರಾಟ್ 35, ಜಡೇಜಾ 35, ಸೂರ್ಯಕುಮಾರ್ 18, ಹಾರ್ಧಿಕ್‌ 33 ರನ್ ಕಲೆಹಾಕಿದರು. ಇನ್ನು ಪಾಕ್ ಪರ ನವಾಜ್-3, ನಸೀಮ್ ಶಾ-2 ವಿಕೆಟ್ ಪಡೆದರು.

ಇನ್ನು, ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಪಾಕ್‌ ತಂಡ, ಟೀಂಇಂಡಿಯಾದ ಶಿಸ್ತು ಬದ್ಧ ಬೌಲಿಂಗ್‌ ದಾಳಿ ಎದುರಿಸಲಾಗದೆ ಬಾಬರ್‌ ಪಡೆ, 19.5 ಓವರ್‌ಗಳಲ್ಲಿ 147ರನ್‌ಗಳಿಗೆ ಆಲೌಟಾಯಿತು. ಪಾಕ್ ಪರ ಓಪನರ್‌ ರಿಜ್ವಾನ್‌ 43, ಇಫ್ತಿಕಾರ್ 28, ಶಹನವಾಝ್‌ 16 ರನ್‌ ಹೊಡೆದರು. ಟೀಮ್ ಇಂಡಿಯಾ ಪರ ಭುವನೇಶ್ವರ್‌ 4, ಹಾರ್ದಿಕ್‌ 3, ಅರ್ಷದೀಪ್‌ 2, ಆವೇಶ್‌ ಖಾನ್‌ 1 ವಿಕೆಟ್‌ ಪಡೆದರು.

Vijayaprabha Mobile App free

ಇನ್ನು, ಆಲ್ರೌಂಡರ್ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.