Breaking: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಟೀಮ್ ಇಂಡಿಯಾಗೆ ಭರ್ಜರಿ ಜಯ 

IND vs BAN: ಗ್ವಾಲಿಯರ್ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ T20ಯಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಹೌದು, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಬೌಲರ್ ಗಳು…

IND vs BAN: ಗ್ವಾಲಿಯರ್ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ T20ಯಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಹೌದು, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಬೌಲರ್ ಗಳು ಬಾಂಗ್ಲಾದೇಶ ವಿರುದ್ಧದ ಮೊದಲ T20ಯಲ್ಲಿ ಬಿರುಸಿನ ಬೌಲಿಂಗ್ ಮಾಡಿದರು. ಇದರೊಂದಿಗೆ ಬಾಂಗ್ಲಾದೇಶ 19.5 ಓವರ್‌ಗಳಲ್ಲಿ 10 ವಿಕೆಟ್‌ಗೆ 127 ರನ್ ಗಳಿಸಿತು. BAN ತಂಡಕ್ಕೆ ಮೀರಜ್ (35) ಮತ್ತು ಶಾಂಟೊ (27) ರನ್’ಗಳ ಕೊಡುಗೆ ನೀಡಿದರು. ಭಾರತದ ಬೌಲರ್‌ಗಳಲ್ಲಿ ವರುಣ್ ಚಕ್ರವರ್ತಿ 3 ಮತ್ತು ಅರ್ಷದೀಪ್ 3 ವಿಕೆಟ್ ಪಡೆದರು. ಪಾಂಡ್ಯ, ಮಯಾಂಕ್ ಯಾದವ್ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.

ಇನ್ನು, ಗೆಲ್ಲಲು 128 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 11.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮ 16, ಸಂಜು ಸ್ಯಾಮ್ಸನ್ 29 ರನ್, ಸೂರ್ಯ ಕುಮಾರ್ ಯಾದವ್ 29, ನಿತೀಶ್ ರೆಡ್ಡಿ 16, ಹಾರ್ದಿಕ್ ಪಾಂಡ್ಯ 39 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಇನ್ನು, ಬಾಂಗ್ಲಾ ಪರ ಮುಸ್ತಫಿಜೂರ್ ರೆಹಮಾನ್ ಹಾಗೂ ಮೆಹಂದಿ ಹಸನ ಮಿರಜ್ ತಲಾ 1 ವಿಕೆಟ್ ಪಡೆದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.