ಬೆಂಗಳೂರು: ತೈಲ ಬೆಲೆ, ಚಿನ್ನದ ಬೆಲೆ, ಗ್ಯಾಸ್ ಸಿಲಿಂಡರ್ ಹಾಗೂ ದೈನಂದಿನ ವಸ್ತುಗಳ ಬೆಲೆ ಏರಿಕೆಯ ನಡುವೆ ಈಗ ರೈತರ ರಸಗೊಬ್ಬರಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಹೌದು, ಇಫ್ಕೊ ರಸಗೊಬ್ಬರ ಬೆಲೆಯನ್ನು ಏರಿಕೆ ಮಾಡಿದ್ದು, ಯೂರಿಯಾ ರಸಗೊಬ್ಬರ ಹೊರತು ಪಡಿಸಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ರಸಗೊಬ್ಬರ ಡಿ-ಅಮೋನಿಯಂ ಫೋಸ್ಪೇಟ್ (DAP) 50 ಕೆಜಿ ತೂಕದ ಚೀಲಕ್ಕೆ ₹1,900 ಆಗಲಿದೆ.
ಈ ಹಿಂದೆ ಡಿ-ಅಮೋನಿಯಂ ಫೋಸ್ಪೇಟ್ (DAP). 50 ಕೆಜಿ ತೂಕದ ಚೀಲಕ್ಕೆ ₹1,200 ಇದ್ದು, ಈಗ 50 ಕೆಜಿ ತೂಕದ ಚೀಲಕ್ಕೆ ₹1,900 ಕ್ಕೆ ಏರಿಕೆ ಮಾಡಲಾಗಿದ್ದು, ಹಿಂದಿನ ಬೆಲೆಗಿಂತ ಈ ಬಾರಿ ಶೇ.58ರಷ್ಟು ಏರಿಕೆ ಮಾಡಲಾಗಿದ್ದು, ಪರಿಷ್ಕೃತ ಬೆಲೆ ಈಗಾಗಲೇ ಜಾರಿಗೆ ತರಲಾಗಿದೆ.
ಇದನ್ನು ಓದಿ: ರೈತರಿಗೆ ಡಬಲ್ ಲಾಭ: ಈ ಕೆಲಸ ಮಾಡಿದರೆ ರೈತರಿಗೆ ಸಿಗಲಿದೆ ₹4000