ಬೆಂಗಳೂರು: ಕರೋನ ಎರಡನೇ ಅಲೆ ಹಿನ್ನಲೆ, ದೇಶದ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದಲ್ಲಿ ಸಹ ಲಾಕ್ ಡೌನ್ ಘೋಷಣೆ ಮಾಡಿದ್ದೂ, ಲಾಕ್ ಡೌನ್ ನಿಂದಾಗಿ ನಿರುದ್ಯೋಗ, ವ್ಯಾಪಾರ ಸ್ಥಗಿತದಂತಹ ಸಂಕಷ್ಟಕ್ಕೆ ಸಿಲುಕಿ ಜನಸಾಮಾನ್ಯರು ಕಷ್ಟಪಡುತ್ತಿರುವ ಸಂದರ್ಭದಲ್ಲೇ ಪೆಟ್ರೋಲ್, ಡೀಸೆಲ್, LPG, ಆಹಾರಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು, ತೈಲ ಬೆಲೆ ಶತಕದಂಚಿಗೆ ಸುಳಿದಿದ್ದರೆ, LPGಯೂ ತುಟ್ಟಿಯಾಗಿದ್ದು, ಅಡುಗೆ ಎಣ್ಣೆ ದರ ಲೀಟರ್ ಗೆ 180 ರೂ. ತಲುಪಿದೆ. ಅಷ್ಟೇ ಅಲ್ಲದೆ, ಅಗತ್ಯ ವಸ್ತುಗಳಾದ ತೊಗರಿಬೇಳೆ ಕೆಜಿಗೆ 160 ರೂ.ಗೆ ತಲುಪಿದ್ದರೆ, ಸಿಮೆಂಟ್ ಬೆಲೆ 5 ತಿಂಗಳ ಹಿಂದೆ 320 ಇತ್ತು. ಈಗ 430 ಆಗಿದೆ.
ಇನ್ನು ಕಬ್ಬಿಣ ಒಂದು ವರ್ಷದ ಹಿಂದೆ ಕೆಜಿ ಗೆ 45-50 ಇತ್ತು, ಈಗ 60-65 ಇದೆ. ಅಗತ್ಯ ವಸ್ತುಗಳಾದ ಆಹಾರಧಾನ್ಯ ಸೇರಿದಂತೆ ತರಕಾರಿ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.