BIG NEWS: ಸಾಲ ತೆಗೆದುಕೊಂಡವರಿಗೆ ಬಹುಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಲಾಕ್ ಡೌನ್ ವೇಳೆ ಆರ್ ಬಿಐ ರೂಪಿಸಿದ್ದ ಲೋನ್ ಮೊರೆಟೋರಿಯಂ ನೀತಿಯಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದ್ದು, 6 ತಿಂಗಳ ಲೋನ್ ಮೊರೆಟೋರಿಯಂ ವಿಸ್ತರಿಸಲು ನಿರಾಕರಿಸಿದೆ. ಹಣಕಾಸಿನ ನೀತಿಗಳು…

supreme court vijayaprabha

ನವದೆಹಲಿ: ಕೊರೋನಾ ಲಾಕ್ ಡೌನ್ ವೇಳೆ ಆರ್ ಬಿಐ ರೂಪಿಸಿದ್ದ ಲೋನ್ ಮೊರೆಟೋರಿಯಂ ನೀತಿಯಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದ್ದು, 6 ತಿಂಗಳ ಲೋನ್ ಮೊರೆಟೋರಿಯಂ ವಿಸ್ತರಿಸಲು ನಿರಾಕರಿಸಿದೆ.

ಹಣಕಾಸಿನ ನೀತಿಗಳು ಸರ್ಕಾರ & ಆರ್‌ಬಿಐ ವ್ಯಾಪ್ತಿಗೆ ಬರುತ್ತವೆ. ಠೇವಣಿದಾರರ ಮೇಲೆ ಪರಿಣಾಮ ಬೀರುವುದರಿಂದ ಸಂಪೂರ್ಣ ಬಡ್ಡಿ ಮನ್ನಾ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವರ್ಷ ಡಿ. 17ರಂದು ನ್ಯಾ. ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ಕೇಂದ್ರ ಸರ್ಕಾರಕ್ಕೆ ನಿರಾಳ ತಂದಿದೆ.

ಹೀಗಾಗಿ ಮೊರೆಟೋರಿಯಂ ಸೌಲಭ್ಯ ಪಡೆದವರಿಗೆ ಸಾಲದ ಮೇಲಿನ ಚಕ್ರಬಡ್ಡಿ ಕಟ್ಟಲೇಬೇಕಾದ ಅನಿವಾರ್ಯತೆ ಎದುರಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.