Newspaper distributors | ಓದುಗರ ಮನೆ ಬಾಗಿಲಿಗೆ ಪತ್ರಿಕೆ ತರುವ ಸೇನಾನಿಗಳ ಮಹತ್ವವೇನು ಗೊತ್ತಾ..?

Newspaper distributors : ಒಂದು ಸುದ್ದಿ ಪತ್ರಿಕೆ ಮುದ್ರಣವಾಗಿ ಓದುಗರ ಕೈ ಸೇರುವ ಹೊತ್ತಿಗೆ, ಅದರ ಹಿಂದೆ ಸಾವಿರಾರು ಜನರ ಪರಿಶ್ರಮವಿದ್ದು, ಈ ಪೈಕಿ ಪತ್ರಿಕಾ ವಿತರಕರ ಪಾತ್ರ ಮಹತ್ವದ್ದು. ಒಂದು ವೇಳೆ ಎಷ್ಟೇ…

newspaper distributors

Newspaper distributors : ಒಂದು ಸುದ್ದಿ ಪತ್ರಿಕೆ ಮುದ್ರಣವಾಗಿ ಓದುಗರ ಕೈ ಸೇರುವ ಹೊತ್ತಿಗೆ, ಅದರ ಹಿಂದೆ ಸಾವಿರಾರು ಜನರ ಪರಿಶ್ರಮವಿದ್ದು, ಈ ಪೈಕಿ ಪತ್ರಿಕಾ ವಿತರಕರ ಪಾತ್ರ ಮಹತ್ವದ್ದು. ಒಂದು ವೇಳೆ ಎಷ್ಟೇ ಅತ್ಯುತ್ತಮವಾಗಿ ಪತ್ರಿಕೆ ರೂಪಿಸಿದರೂ ಸರಿಯಾದ ಸಮಯಕ್ಕೆ ಓದುಗರ ಕೈ ಸೇರಿದಿದ್ದರೆ ಎಲ್ಲರ ಶ್ರಮ ವ್ಯರ್ಥವಾಗುತ್ತದೆ.

Newspaper distributors : ಪತ್ರಿಕಾ ವಿತರಕ ಕೆಲಸಕ್ಕೆ ಹೊಸಬರ ಕೊರತೆ

ಇತ್ತೀಚಿನ ಕೆಲವು ವರ್ಷಗಳಲ್ಲಿ ಪತ್ರಿಕಾ ವಿತರಕ ಕೆಲಸಕ್ಕೆ ಹೊಸಬರು ಬರುತ್ತಿಲ್ಲ. ಈ ಹಿಂದಿನಿಂದಲೂ ಈ ವೃತ್ತಿ ಮಾಡಿಕೊಂಡವರೇ ಈಗಲೂ ಮುಂದುವರಿಸುತ್ತಿದ್ದಾರೆ. ಈ ಹಿಂದೆಯಾದರೆ ಪೇಪರ್ ಹಂಚಲು ಹುಡುಗರು ಓಡೋಡಿ ಬರುತ್ತಿದ್ದರು. ಅವರ ವಿದ್ಯಾಭ್ಯಾಸಕ್ಕೆ ಒಂಚೂರು ಕಾಸು ಆಗುತ್ತಿತ್ತು. ಆದರೆ, ಈಗ ಮುದ್ರಣವಾದ ಪತ್ರಿಕೆಗಳನ್ನು ಹಂಚಲು ಹುಡುಗರೇ ಸಿಗುತ್ತಿಲ್ಲ ಎಂಬುದು ವಿತರಕರ ಅಳಲು.

ಇದನ್ನೂ ಓದಿ: National Press Day | ಇಂದು ರಾಷ್ಟೀಯ ಪತ್ರಿಕಾ ದಿನ

Vijayaprabha Mobile App free

Newspaper distributors :  ಪತ್ರಿಕಾ ವಿತರಕರ ಸಮಸ್ಯೆ, ಸವಾಲುಗಳು

Newspaper distributors

ನಗರವೇ ಇರಲಿ, ಹಳ್ಳಿಯೇ ಇರಲಿ ಪತ್ರಿಕಾ ವಿತರಣೆ ಕಾರ್ಯವು ಸುಲಭದ್ದಲ್ಲ. ಬಹಳ ಸವಾಲಿನ ಕೆಲಸವಾಗಿದ್ದು, ಬಹುತೇಕ ನಗರಗಳಲ್ಲಿ ನಸುಕಿನಲ್ಲಿ ಪತ್ರಿಕಾ ವಿತರಣೆಗೆ ಹೊರಟಾಗ ನಾಯಿಗಳದ್ದೇ ಕಾಟ ಹೆಚ್ಚು. ಅನೇಕ ಬಾರಿ ಕಳ್ಳಕಾಕರ ಬೆದರಿಕೆಯನ್ನು ವಿತರಕರು ಎದುರಿಸುವುದಲ್ಲದೆ, ಗಗನಚುಂಬಿ ಅಪಾರ್ಟ್‌ಮೆಂಟ್ ಗಳ ಓದುಗರ ಫ್ಲಾಟ್‌ಗೆ ಪತ್ರಿಕೆ ತಲುಪಿಸುವುದೇ ದೊಡ್ಡ ಸಾಹಸವಾಗಿದೆ

ಅಭದ್ರತೆ

ಭದ್ರತೆ ಕಾರಣಕ್ಕೆ ಬಹಳಷ್ಟು ಅಪಾರ್ಟ್‌ಮೆಂಟ್ ನವರು ಲಿಮ್ಮಲ್ಲಿ ಹೋಗಲು ಅವಕಾಶ ಕಲ್ಪಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಪರ್ಯಾಯವಾಗಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿಗೆ ಪತ್ರಿಕೆ ನೀಡಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಪತ್ರಿಕಾ ವಾಹನಗಳು ತಡವಾದಾಗ, ವಿತರಣೆಯೂ ವಿಳಂಬವಾಗುವುದಲ್ಲದೆ, ಮನೆಗಳಿಗೆ ಪತ್ರಿಕೆ ವಿಳಂಬವಾಗಿ ಪತ್ರಿಕೆ ತಲುಪಿದಾಗ ಓದುಗರಿಂದ ಆಕ್ರೋಶದ ಮಾತು ಕೇಳಬೇಕಾಗುತ್ತದೆ.

ಇದನ್ನೂ ಓದಿ : IPL Mega Auction 2025 | ಐಪಿಎಲ್ 2025 ಮೆಗಾ ಹರಾಜಿಗೆ 574 ಆಟಗಾರರ ಶಾರ್ಟ್​ ಲಿಸ್ಟ್ ಪ್ರಕಟ

ಜೀವ ವಿಮೆ ಬೇಡಿಕೆ

ಸರಕಾರ ಪತ್ರಿಕಾ ವಿತರಕರು ಅಪಘಾತದಲ್ಲಿ ಮೃತಪಟ್ಟರೆ ₹2 ಲಕ್ಷ, ಗಾಯ ಗೊಂಡವರಿಗೆ ₹1 ಲಕ್ಷ ನೆರವು ಒದಗಿಸಬೇಕು. ಈ ಸೌಲಭ್ಯಕ್ಕೆ 70 ವರ್ಷ ಮೇಲ್ಪಟ್ಟವರನ್ನೂ ಪರಿಗಣಿಸಬೇಕು. ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಸರಕಾರ ₹10 ಕೋಟಿ ಕ್ಷೇಮ ನಿಧಿ ಸ್ಥಾಪಿಸಬೇಕು. ಮಾಧ್ಯಮ ಅಕಾಡೆಮಿ, ಪ್ರಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಕಾರ್ಯನಿರತ ಪತ್ರಕರ್ತರ ಸಂಘ ದತ್ತಿ ಪ್ರಶಸ್ತಿ ವಿತರಕರನ್ನು ಆಯ್ಕೆ ಮಾಡಬೇಕೆಂಬುದು ಬೇಡಿಕೆಯಾಗಿದೆ.

ಇತರೆ ಬೇಡಿಕೆಗಳು

ಈ ಮೊದಲು ಸೈಕಲ್‌ಲ್ಲಿ ಪೇಪರ್ ಹಂಚಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ವಿತರಣೆಗೆ ವೇಗ ನೀಡಲು ಎಲೆಕ್ಟಿಕಲ್ ಬೈಕ್ ಸೌಲಭ್ಯ ದೊರೆತರೆ ಹೆಚ್ಚು ಅನುಕೂಲವಾಗಲಿದ್ದು, ಈ ಬೈಕ್‌ಗಳನ್ನು ಕೊಳ್ಳಲು ಸರಕಾರವು ಬಡ್ಡಿರಹಿತ ಸಾಲ ನೀಡಬೇಕೆಂಬುದು ಬೇಡಿಕೆ. ಪತ್ರಿಕಾ ವಿತರಕರಿಗಾಗಿ ಒಂದು ಕಚೇರಿಯ ವ್ಯವಸ್ಥೆಯಾಗಬೇಕಿದೆ. 3,000ಕ್ಕೂ ಅಧಿಕ ಸದಸ್ಯರಿರುವ ವಿತರಕರ ಒಕ್ಕೂಟದ ಕಾರ್ಯನಿರ್ವಹಣೆಗೆ ಸುಲಭವಾಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.