ಕೇಂದ್ರ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಹೆಣ್ಣು ಮಕ್ಕಳಿಗು ಕೂಡ ಒಂದು ಯೋಜನೆ ಇದೆ. ಇದರ ಹೆಸರು ಸುಕನ್ಯಾ ಸಮೃಧಿ ಯೋಜನೆ. ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳು ಈ ಯೋಜನೆಗೆ ಸೇರಬಹುದು. ಪ್ರತಿ ಮನೆಗೆ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆಗೆ ಸೇರಬಹುದು.
ಮಗಳಿಗೆ ಸುವರ್ಣ ಭವಿಷ್ಯವನ್ನು ನೀಡಲು ಬಯಸುವ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆಗೆ ಸೇರುವುದು ಉತ್ತಮ. ಮಗಳ ಹೆಸರಿನಲ್ಲಿ ರೂ .250 ಠೇವಣಿ ಇರಿಸುವ ಮೂಲಕ ಈ ಖಾತೆಯನ್ನು ತೆರೆಯಬಹುದು. ಹತ್ತಿರದ ಬ್ಯಾಂಕ್‌ಗೆ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆಗೆ ಸೇರಿಕೊಳ್ಳಬಹುದು. ನಂತರ ನೀವು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತ ಹೋಗಬೇಕು.
ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ವರೆಗೂ ಹೂಡಿಕೆ ಮಾಡಬಹುದು. ಈ ಯೋಜನೆಯ ಮುಕ್ತಾಯ ಅವಧಿ 21 ವರ್ಷಗಳು. ಈ ಯೋಜನೆಗೆ ಸೇರ್ಪಡೆಯಾದ ವರ್ಷದಿಂದ 15 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕಾಗುತ್ತದೆ. ನಂತರ ಹಣವನ್ನು ಕಟ್ಟುವ ಅಗತ್ಯವಿಲ್ಲ. 21 ವರ್ಷಗಳ ನಂತರ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದು.
ಅಗತ್ಯವಿದ್ದರೆ, ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಸ್ವಲ್ಪ ಹಣವನ್ನು ಹಿಂಪಡೆಯಬಹುದು. ನೀವು ಪ್ರತಿ ತಿಂಗಳು 3,000 ರೂ. ಠೇವಣಿ ಮಾಡುತ್ತಾ ಬಂದರೆ, ನೀವು ಮುಕ್ತಾಯದ ಸಮಯಕ್ಕೆ ಸುಮಾರು 15 ಲಕ್ಷ ರೂ. ಲಭಿಸುತ್ತದೆ. ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇಕಡಾ 7.6 ಆಗಿದೆ.